CrimeDistricts

ಹಳ್ಳದಲ್ಲಿ ಕೊಚ್ಚಿಹೋಗಿದ್ದ ಇಬ್ಬರು ಪೊಲೀಸರ ಪೈಕಿ ಒಬ್ಬರ ಮೃತದೇಹ ಪತ್ತೆ

ಕೊಪ್ಪಳ; ಗಣೇಶ ಹಬ್ಬದ ಬಂದೋಬಸ್ತ್‌ ಕೆಲಸಕ್ಕೆ ಗಜೇಂದ್ರಗಡಕ್ಕೆ ಹೋಗಿ ತೊಂಡೆಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಗದಗ ಜಿಲ್ಲೆ ಮುಂಡರಗಿ ಠಾಣೆಯ ಇಬ್ಬರು ಪೊಲೀಸರ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಮಧ್ಯಾಹ್ನ 2.15ರ ಸುಮಾರಿಗೆ ನಿಂಗಪ್ಪ ಅವರ ಮೃತದೇಹ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನ್ಸ್‌ಟೇಬಲ್‌ಗಳಾದ ಮಹೇಶ ವಕ್ಕರದ ಮತ್ತು ನಿಂಗಪ್ಪ ಹಲವಾಗಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕೊಪ್ಪಳ, ಗದಗ ಜಿಲ್ಲೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಳಿಗ್ಗೆಯಿಂದಲೇ ಅವರಿಗಾಗಿ ಹುಡುಕಾಟ ನಡೆಸಿದ್ದರು. ಇನ್ನೊಬ್ಬರ ಪತ್ತೆಗಾಗಿ ಚುರುಕಿನಿಂದ ಶೋಧ ಕಾರ್ಯ ನಡೆದಿದೆ. ಸುತ್ತಮುತ್ತಲೂ ಇರುವ ಹಳ್ಳಗಳಲ್ಲಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಪ್ರಜಾವಾಣಿಗೆ ತಿಳಿಸಿದ್ದಾರೆ.

Share Post