CrimeDistricts

ಅಪರಿಚಿತ ಯುವಕರಿಂದ ಮೂವರಿಗೆ ಚಾಕು ಇರಿತ

ಗದಗ; ಅಪರಿಚಿತ ಯುವಕರು ಮೂವರಿಗೆ ಚಾಕು ಇರಿದಿರುವ ಘಟನೆ ಗದಗ ನಗರದಲ್ಲಿ ನಡೆದಿದೆ. ಕೆಲ ಯುವಕರು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದರು. ಈ ವೇಳೆ ಅವರಿಗೆ ಬುದ್ಧಿ ಹೇಳಿದ್ದಕ್ಕೆ ಈ ಕೃತ್ಯ ಎಸಗಿದ್ದಾರೆ. ಜೋಡ ಮಾರುತಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ.

ವಸಂತ ಬಾಕಳೆ, ಗೋಪಾಲ ಖೋಡೆ, ಮಾಧು ಸಾಬದಿ ಎಂಬುವವರು ಚಾಕು ಇರಿತಕ್ಕೊಳಗಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂವರು ಆರೋಪಿಗಳನ್ನ ಶಹರ ಪೊಲೀಸರು ಬಂಧಿಸಿದ್ದಾರೆ.

Share Post