ಚಿರತೆ ಹಾವಳಿಯಿಂದ ಕಂಗಾಲು; ಬೆಳೆ ಕಟಾವು ಮಾಡಲು ಭೀತಿ
ಬೆಂಗಳೂರು; ಬೆಂಗಳೂರು ಹೊರವಲಯದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಜನರು ಭಯದಿಂದ ಜೀವನ ಸಾಸುವಂತಾಗಿದೆ. ಅದರಲ್ಲೂ ದೇವನಹಳ್ಳಿ ಸುತ್ತಮುತ್ತ ಹೊಲಗಳಿಗೆ ಹೋಗಲೂ ಜನ ಹೆದರುತ್ತಿದ್ದಾರೆ. ಬೆಳ ಕಟಾವು ಮಾಡಲು ಪರದಾಡುತ್ತಿದ್ದಾರೆ. ಗಂಡಸರು ದೊಣ್ಣೆ ಹಿಡಿದುಕೊಂಡು ಕಾಯುವ ಕೆಲಸ ಮಾಡಿದರೆ, ಮಹಿಳೆಯರು ಬೆಳೆ ಕಟಾವು ಮಾಡುವ ದೃಶ್ಯಗಳು ಕಂಡುಬರುತ್ತಿವೆ.
ಬೆಂಗಳೂರಿನ ತುರಹಳ್ಳಿ ಬಳಿ ಚಿರತೆಯೊಂದು ಜಿಂಕೆಯನ್ನು ಭೇಟೆಯಾಡಿತ್ತು. ಅದರ ವಿಡಿಯೋ ಕೂಡಾ ವೈರಲ್ ಆಗಿತ್ತು. ಇದರಿಂದಾಗಿ ಕೆಂಗೇರಿ ಸುತ್ತಮುತ್ತಲ ಜನರು ಭೀತಿಗೊಳಗಾಗಿದ್ದಾರೆ. ಕೆಂಗೇರಿ ಸಮೀಪದ ಕೋಡಿಪಾಳ್ಯ, ಚಟ್ಟಿಪಾಳ್ಯ, ಕಗ್ಗಲೀಪುರ-ತುರಹಳ್ಳಿ ಅರಣ್ಯ ಪ್ರದೇಶ, ಸೋಂಪುರ, ಶ್ರೀನಿವಾಸಪುರ, ಆರ್.ಆರ್.ನಗರ, ಮೈಲಸಂದ್ರ, ಕೋಡಿಪಾಳ್ಯ, ಗೆಟ್ಟಿಗರಹಳ್ಳಿ ಜನಕ್ಕೆ ಆತಂಕ ಹೆಚ್ಚಾಗಿದೆ.