BengaluruCrime

ವೇಶ್ಯಾವಾಟಿಕೆಗೆ ದೂಡಲು 12 ಬಾಲಕಿಯರ ಕಳ್ಳ ಸಾಗಣೆ!

ಬೆಂಗಳೂರು; 12 ಬಾಲಕಿಯರನ್ನು ವೇಶ್ಯಾವಾಟಿಕೆಗೆ ದೂಡಲು ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದು, ಬಾಲಕಿಯರನ್ನು ರಕ್ಷಣೆ ಮಾಡಿದ್ದಾರೆ.. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಮಾರು 26 ಮಧ್ಯವರ್ತಿಗಳನ್ನು ಬಂಧಿಸಲಾಗಿದೆ.. ಇನ್ನು 5 ಮಂದಿ ಗ್ರಾಹಕರನ್ನು ಕೂಡಾ ಅರೆಸ್ಟ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ..
ಹೆಣ್ಣು ಮಕ್ಕಳನ್ನು ಕಳ್ಳ ಸಾಗಣೆ ಮಾಡಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು.. ಅದರ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.. ಕೆಲ ತಿಂಗಳಿಂದ ಪೊಲೀಸರು ಈ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದರು.. ಕೊನೆಗೂ ಕಳ್ಳ ಸಾಗಣೆ ತಂಡ ಸಿಕ್ಕಿಬಿದ್ದಿದೆ..
ಸರ್ಕಾರೇತರ ಸಂಸ್ಥೆಯೊಂದು ನೀಡಿದ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ.. ಸಿಸಿಬಿಯ ಮಹಿಳಾ ಸಂರಕ್ಷನಾ ದಳ ಹಾಗೂ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.. ಸುಮಾರು 14 ರಿಂದ 17 ವರ್ಷದ 12 ಬಾಲಕಿಯರನ್ನು ಈಗ ರಕ್ಷಣೆ ಮಾಡಲಾಗಿದೆ.. ಬಂಧನವಾಗಿರುವ ಆರೋಪಿಗಳಿಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ.. ರಕ್ಷಿಸಲ್ಪಟ್ಟ ಬಾಲಕಿಯರಿಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.

Share Post