DistrictsPolitics

ಬಿಜೆಪಿಯಿಂದ ಹೆಜ್ಜೆ ಹೊರಗಿಟ್ಟ ಕರಡಿ ಸಂಗಣ್ಣ; ಜೆಡಿಎಸ್‌ ಸೇರ್ತಾರಾ ಕೊಪ್ಪಳ ಸಂಸದ..?

ಕೊಪ್ಪಳ; ಟಿಕೆಟ್‌ ಸಿಗದಿದ್ದಕ್ಕೆ ಬೇಸತ್ತು ಬಿಜೆಪಿ ತೊರೆಯುವ ನಾಯಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಈ ಸಾಲಿಗೆ ಸಂಸದ ಕರಡಿ ಸಂಗಣ್ಣ ಕೂಡಾ ಸೇರ್ಪಡೆಯಾಗುತ್ತಿದ್ದಾರೆ. ಇಂದು ಸಭೆ ನಡೆಸುತ್ತಿರುವ ಅವರು, ಬಿಜೆಪಿ ತೊರೆದು ಜೆಡಿಎಸ್‌ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಿದೆ.

ಸಂಸದರಾಗಿರುವ ಕರಡಿ ಸಂಗಣ್ಣ ಅವರು ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದರು. ಆದ್ರೆ ಸಂಸದರಿಗೆ ವಿಧಾನಸಭಾ ಟಿಕೆಟ್‌ ನೀಡೋದಿಲ್ಲ ಅಂತ ಬಿಜೆಪಿ ಹೈಕಮಾಂಡ್‌ ಹೇಳಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಪುತ್ರ ಗವಿಸಿದ್ದಪ್ಪ ಕರಡಿಗೆ ಟಿಕೆಟ್‌ ನೀಡುವಂತೆ ಕರಡಿ ಸಂಗಣ್ಣ ಮನವಿ ಮಾಡಿಕೊಂಡಿದ್ದರು. ಆದ್ರೆ ಹೈಕಮಾಂಡ್‌ ಇದಕ್ಕೆ ನಿರಾಕರಿಸಿದೆ. ಇದರಿಂದ ಅಸಮಾಧಾನಗೊಂಡಿರುವ ಕರಡಿ ಸಂಗಣ್ಣ, ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಇಂದು ಬೆಂಬಲಿಗರ ಸಭೆ ಕರೆದಿರುವ ಕರಡಿ ಸಂಗಣ್ಣ, ಸಭೆ ಬಳಿಕ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಅನಂತರ ಅವರು ಜೆಡಿಎಸ್‌ ಸೇರಿ ಏಪ್ರಿಲ್‌ 19 ರಂದು ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

 

Share Post