DistrictsPolitics

ಜಗದೀಶ್‌ ಶೆಟ್ಟರ್‌ ಗಡುವು ನೀಡಿದ್ದರ ಹಿನ್ನೆಲೆ; ಪ್ರಹ್ಲಾದ್‌ ಜೋಷಿ ಸಂಧಾನ

ಹುಬ್ಬಳ್ಳಿ; ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಗ್ಗೆ ಇಂದು ಬೆಳಗ್ಗೆ 11 ಗಂಟೆಯೊಳಗೆ ನಿರ್ಧಾರ ಪ್ರಕಟಿಸಿ, ಇಲ್ಲದಿದ್ದರೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಜಗದೀಶ್‌ ಶೆಟ್ಟರ್‌ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರು ಶೆಟ್ಟರ್‌ ಮನೆಗೆ ಭೇಟಿ ನೀಡಿ ಸಂಧಾನ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಕೂಡಾ ಇದ್ದರು.

ಇದೇ ವೇಳೆ ಸ್ಥಳದಲ್ಲಿ ಸೇರಿದ್ದ ಶೆಟ್ಟರ್‌ ಅಭಿಮಾನಿಗಳು ಘೋಷಣೆ ಕೂಗಿದರು. ಶೆಟ್ಟರ್‌ಗೆ ಟಿಕೆಟ್‌ ನೀಡಲೇಬೇಂದು ಆಗ್ರಹಿಸಿದರು. ಇನ್ನು ಶೆಟ್ಟರ್‌ ಭೇಟಿ ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರು, ಶೆಟ್ಟರ್‌ ಸೇವೆ ಪಕ್ಷಕ್ಕ ಅವಶ್ಯಕತೆ ಇದೆ. ಶೆಟ್ಟರ್‌ ವಿಷಯದಲ್ಲಿ ಪಕ್ಷ ವಿಚಾರ ಮಾಡುತ್ತಿದೆ. ಶೀಘ್ರದಲ್ಲೇ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

Share Post