Districts

ಪ್ರತಿಷ್ಠೆಗೆಂದು ಪ್ರಾರಂಭವಾದ ವಿಮಾನ ನಿಲ್ದಾಣ ಸ್ಥಗಿತ ಗೊಳ್ಳದಿದ್ದರೆ ಸಾಕು

(ಮಂಜುನಾಥ್‌ ಗರಗ)

ಶಿವಮೊಗ್ಗ: ಮಾಜಿ ಮಖ್ಯಮಂತ್ರಿ ಯಡಿಯೂರಪ್ಪನವರ ಕನಸು ಹಾಗು ಸಂಸದ ಬಿ ವೈ ರಾಘವೇಂದ್ರರ ಶ್ರಮದಿಂದ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ತಲೆಎತ್ತಿದೆ. ಇದೇ ಫೆ. 27 ರಂದು ಪ್ರಧಾನಿ ನರೇಂದ್ರ ಮೋದಿಯವರು ಇದನ್ನ ಉದ್ಘಾಟಿಸಲಿದಾದರೆ. ಸೋಮವಾರದಿಂದ ಶಿವಮೂಗ್ಗ ನಗರದಿಂದ ವಿಮಾನ ಹಾರಾಟ ಪ್ರಾರಂಭವಾಗಲಿದೆ. ಈ ವಿಮಾನ ನಿಲ್ದಾಣವು ಶಿವಮೊಗ್ಗ, ಚಿಕ್ಕಮಂಗಳೂರು, ದಾವಣಗೆರೆ, ಚಿತ೯ದುಗ೯ ಜಿಲ್ಲಿಗಳಿಗೆ ಅನುಕೂಲವಾಗಲಿದೆ ಎಂದು ನಿಮಿ೯ಸಲಾಗಿದೆ.
ಈ ವಿಮಾನ ನಿಲ್ದಾಣ ನಿಜವಾಗಿಯೂ ಅವಶ್ಯಕತೆ ಇದೆಯ ಎಂಬ ಪ್ರಶ್ನೆ ಹಲವು ಜನರಲ್ಲಿ ಮೂಡಿದೆ. ರಾಜ್ಯದಲ್ಲಿ ಈಗಾಗಲೇ ಹಲವು ದೇಶಿಯ ವಿಮಾನ ನಿಲ್ದಾಣಗಳಿವೆ, ಮೈಸೂರಿನಂಥ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳದಲ್ಲೇ ವಿಮಾನಗಳು ಕ್ರಮವಾಗಿ ಹಾರಾಡುತ್ತಿಲ್ಲ. ಬೆಂಗಳೂರು ಮಂಗಳೂರು ಬಿಟ್ಟು ಕರ್ನಾಟಕದ ಯಾವ ನಿಲ್ದಾಣಗಳೂ ಘಟ್ಟಿಯಾಗಿ ನೆಲೆಯೂರದಿರುವಾಗ ಇನ್ನು ಗ್ರಾಮಾಂತರ ಪ್ರದೇಶದ ಶಿವಮೊಗ್ಗ ವಿಮಾನ ನಿಲ್ದಾಣ ಸಂಚಾರಿಗಳಿಲ್ಲದೆ ಸದ್ಯದಲ್ಲೇ ಸ್ಥಗಿತಗೊ0ಡರೆ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಹೀಗಿರುವಾಗ ಇದಕ್ಕಾಗಿ ಸುರಿದಿರುವ ಕೋಟ್ಯಂತರ ಹಣ ಶ್ರಮಗಳೆಲ್ಲ ವ್ಯರ್ಥವೆನಿಸುತ್ತದೆ ಎಂದು ಜಿಲ್ಲೆಯ ಕೆಲವರ ಅಭಿಪ್ರಾಯ.
ಶಿವಮೊಗ್ಗ ನಗರದಲ್ಲಿ ನಗರ ಸಾರಿಗೆ ವ್ಯವಸ್ಥೆಯೇ ಸರಿಯಾಗಿಲ್ಲ. ಇನ್ನು ರೈಲುನಿಲ್ದಾಣ ಪುರಾತನ ಕಾಲವನ್ನೇ ನೆನಪಿಸುತ್ತಿದೆ. ಕೋಮುವಾದಿಗಳ ಆರ್ಭಟದಿಂದಾಗಿ ಜಿಲ್ಲೆಗೆ ಬರಲು ಹೆದರುವ ಪರಿಸ್ಥಿತಿ ಇದೆ. ಬಡಜನರ ಬವಣೆ ನೂರಾರಿವೆ. ಇನ್ನು ವೀದೇಶಿ ಕಂಪನಿಗಳು ಬಂಡಳವಾಳ ಹೂಡಿಕೆ ಮಾಡಲು ಇಲ್ಲಿನ ಪರಿಸ್ಥತಿ ಅನುಕೂಲಕರವಾಗಿಲ್ಲ ಎನ್ನುವುದು ಹಲವರ ವಾದ.
ಇಂಥ ಸಂದರ್ಭದಲ್ಲಿ ಶಿವಮೊಗ್ಗದಿಂದ ವಿಮಾನದಲ್ಲಿ ಸಂಚರಿಸುವವರು ಯಾರು? ಎಷ್ಟು ಜನರಿಗೆ ಅಂಥ ಆರ್ಥಿಕ ಸಾಮರ್ಥ್ಯವಿದೆ? ದೂರದ ಹಳ್ಳಿಗಳಿಂದ ಬಂದು ವಿಮಾನ ನಿಲ್ದಾಣದ ವಿಧಿ ವಿಧಾನಗಳನ್ನು ಮುಗಿಸಿ ವಿಮಾನ ಏರಿ ಬೆಂಗಳೂರಿಗೆ ಹೋಗಲು ಒಟ್ಟಾಗಿ ತಗಲುವ ಸಮಯದಲ್ಲಿ ರಸ್ತೆ ಅಥವಾ ರೈಲು ಮಾರ್ಗದಲ್ಲಿ ಮುಕ್ಕಾಲು ದೂರ ಕ್ರಮಿಸಿರುತ್ತಾರೆ. ಒಟ್ಟಾರೆಯಾಗಿ ಇದು ಜನಸಾಮಾನ್ಯರಿಗೆ ಎಷ್ಟರ ಮಟ್ಟಿಗೆ ಪ್ರಯೋಜನಕಾರಿಯಾಗಬಹುದೆಂದು ಗೊತ್ತಿಲ್ಲಿ, ಪ್ರತಿಷ್ಠೆಗೆಂದು ಪ್ರಾರಂಭವಾದ ವಿಮಾನ ನಿಲ್ದಾಣ ಸ್ಥಗಿತ ಗೊಳ್ಳದಿದ್ದರೆ ಸಾಕು ಎಂದು ಜನ ಆಶಿಸುತಿದ್ದಾರೆ.
ಇಷ್ಟಕ್ಕೂ ಈ ನಿಲ್ದಾಣ ಇಲ್ಲಿ ಯಾತಕ್ಕಾಗಿ ಯಾರಿಗಾಗಿ ಎಂಬುದು ? ಇಲ್ಲೇ ಪಕ್ಕದ ಭದ್ರಾವತಿಯಲ್ಲಿ ಕಾರ್ಖಾನೆಗಳು ಮುಚ್ಚಿ ಹೋಗುತ್ತಾ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಮಲೆನಾಡಿನ ಮುಖ್ಯವಾಣಿಜ್ಯ ಬೆಳೆ ಅಡಿಕೆಗೆ ನಾನಾ ಬಗೆಯ ರೋಗ ತಗುಲಿ ನಾಶವಾಗುತ್ತಾ ರೈತರನ್ನು ಕಂಗಾಲಾಗಿಸಿದೆ ಇದರ ಸಮಸ್ಯಗಳ ಬಗ್ಗೆ ಗಮನ ಹರಿಸಿ ಎಂದು ಜಲ್ಲೆಯ ಜನ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲು ಆಗಮಿಸುತ್ತಿರುವ ಪ್ರಧಾನಿಗೆ ಕೇಳಿಕೊಳ್ಳುತಿದ್ದಾರೆ.

Share Post