ಪರೇಡ್‌ನಲ್ಲಿ ಮಿಂಚಲಿರುವ ಕರ್ನಾಟಕದ ಸಾಂಪ್ರದಾಯಿಕ ಉಡುಗೆ
ಬಾಗಲಕೋಟೆ: ಕರ್ನಾಟಕದ ಸಾಂಪ್ರದಾಯಿಕ ಉಡುಗೆ ಅಂತಲೇ ಹೆಸರುವಾಸಿಯಾಗಿರುವ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಬ್ಲೌಸ್‌ಪೀಸ್ ಈ ಬಾರಿ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆಯುವ ಸ್ತಬ್ಧಚಿತ್ರಗಳ ಕರಕುಶಲ ವಸ್ತು ಪ್ರದರ್ಶನದಲ್ಲಿ ಮಿಚಲಿದೆ. ಬಿ.ಸಿ.ಪಾಟೀಲ್ ಆಗೂ ಪ್ರೇಮಾ ಅಭಿನಯದ ಕೌರವ ಸಿನಿಮಾದಲ್ಲಿ ಈ ಸೀರೆ ಬಗ್ಗೆ ಒಂದು ಹಾಡನ್ನು ಅತ್ಯದ್ಬುತವಾಗಿ ಬರೆದಿದ್ದಾರೆ. ಇಳಕಲ್ ಸೀರೆ ಉಟ್ಕೊಂಡು, ಮೊಣಕಾಲ್ಗಂಟ ಎತ್ಕೊಂಡು ಏರಿ ಮೇಲೆ ಏರಿ ಬಂದ್ಲು ನಾರಿ, ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ ಎಂಬ ಹಾಡು ಇಡೀ ದೇಶಾದ್ಯಂತ ಹೆಸರುವಾಸಿಯಾಗಿದೆ.
ಈ ಹಾಡು ಸಾಂಪ್ರದಾಯಿಕತೆಯನ್ನು ಎತ್ತಿ ತೋರಿಸಿರುವುದಷ್ಟೇ ಅಲ್ಲದೆ. ವಿದೇಶಗಳಲ್ಲೂ ಇದರ ಅಸ್ತಿತ್ವದ ಬಗ್ಗೆ ತಿಳಿಸದೆ. ದಶಕಗಳಿಂದಲೂ ಇದಕ್ಕಿರುವ ಬೇಡಿಕೆ ಮಾತ್ರ ಕಡಿಮೆಯಾಗುತ್ತಲೇ ಇಲ್ಲ, ಮಹಿಳೆಯರು, ಯುವತಿಯರು, ಪುಟ್ಟ ಮಕ್ಕಳಿಗೂ ಕೂಡ ಈ ಇಳಕಲ್ ಸೀರೆಯನ್ನು ಒಮ್ಮೆಯಾದರೂ ಉಡಬೇಕು ಎಂಬ ಆಸೆ ಖಂಡಿತವಾಗಿಯೂ ಇರುತ್ತದೆ. ಇದರ ಜೊತೆಗೆ ಗುಳೇದಗುಡ್ಡದ ಬ್ಲೌಸ್ ಪೀಸ್ ಎರಡೂ ಒಳ್ಳೆ ಕಾಂಬಿನೇಷನ್ ಕೂಡ ಹೌದು. ಇದಕ್ಕೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿ. ಕೈ ಮಗ್ಗದಿಂದ ತಯಾರಾಗುವ ಈ ಸೀರೆ ಮತ್ತು ಖಣ ತನ್ನದೇ ಆದ ಛಾಪು ಮೂಡಿಸಿದೆ.
ಇಂತಹ ಇತಿಹಾವಿರುವ ಸಾಂಪ್ರದಾಯಿಕ ಉಡುಗೆ ದೆಹಲಿ ಪರೇಡ್‌ನಲ್ಲಿ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಆಯ್ಕೆಕಾಗುವುದು ಅಂದ್ರೆ ಮಾತಾ..ಈ ವಿಚಾರ ಕೇಳ್ತಿದ್ದಂತೆ ಬಾಗಲಕೋಟೆ ಜನತೆ ಮತ್ತು ನೇಕಾರರು, ಖುಷಿಯಲ್ಲಿ ಮಿಂದೆದ್ದರು. ಇಷ್ಟು ದಿನ ತಾವು ಪಾಲಿಸಿಕೊಂಡು ಬಂದಿರುವ ವೃತ್ತಿಗೆ ಇಂದು ಮನ್ನಣೆ ದೊರೆತಿದೆ ಎಂದು ಸಂತೋಷವಾಗಿದ್ದಾರೆ.
ಇವೆಲ್ಲದರ ನಡುವೆ ವ್ಯಾಪಾರ ಪಾತಾಳಕ್ಕೆ ಕುಸಿದಿದೆ. ಕೊರೊನಾ ಕರಿನರೆಳಿನಿಂದ ಮಾರುಕಟ್ಟೆಯಿಲ್ಲದೆ ನೇಕಾರರು ಕನ್ಣೀರು ಹಾಕುವಂತಾಗಿದೆ. ಸರ್ಕಾರ ಇದರ ಕಡೆ ಗಮನ ಹರಿಸಿ ನಮ್ಮ ಕಷ್ಟವನ್ನು ಪರಿಹಾರ ಮಾಡಿ ಎಂದು ಅಲ್ಲಿನ ನೇಕಾರರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಕೊರೊನಅದಿಂದಾಗಿ ಆನ್ಲೈನ್ ವ್ಯಾಪಾರ ಶುರುವಾಗಿದೆ. ಬದುಕು ನಡೆಸಲು ಗುಳೇದ ಗುಡ್ಡ ಖಣದಿಂದ ಮಾಸ್ಕ್ ಹಾಗೂ ದೀಪಾವಳಿ ಆಕಾಶ ನುಟ್ಟಿ ತಯಾರು ಮಾಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸಾಂಪ್ರದಾಯಿಕ ಉಡುಗೆ ಅದೋಗತಿಗೆ ತಲುಪಬಾರದು, ಶತಶತಮಾನಗಳಿಂದ ಅದೇ ವೃತ್ತಿಯನ್ನು ಅವಲಂಬಿಸಿ ಕೈ ಮಗ್ಗಗಳಿಂದ ಸೀರೆ ನೇಯುವ ಬದುಕು ಹಸನಾಗಿಸುವುದು ಸರ್ಕಾರದ ಕೈಯಲ್ಲಿದೆ.