Districts

ಹಿಜಾಬ್‌ ಧರಿಸಿ ವಿಧಾನಸೌಧಕ್ಕೆ ಬರುತ್ತೇನೆ; ಶಾಸಕ ಖನೀಜ್‌ ಫಾತಿಮಾ

ಕಲಬುರಗಿ: ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಖನೀಜ್‌ ಫಾತಿಮಾ ಅವರು ಹಿಜಾಬ್‌ ವಿಚಾರದಲ್ಲಿ ಸವಾಲ್‌ ಹಾಕಿದ್ದಾರೆ. ನಾನು ವಿಧಾನಸೌಧಕ್ಕೆ ಹಿಜಾಬ್ ಧರಿಸಿಯೇ ಬರುತ್ತೇನೆ. ಹಿಜಾಬ್‌ ಧರಿಸಿಯೇ ಕೂರುತ್ತೇನೆ. ಅದ್ಯಾರು ತಡೀತಾರೋ ತಡೀಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಅದನ್ನು ಮರೆಮಾಚೋದಕ್ಕಾಗಿ ಹಿಜಾಬ್‌ನಂತಹ ವಿಚಾರಗಳನ್ನು ಮುನ್ನಲೆಗೆ ತರಲಾಗುತ್ತಿದೆ. ಇದು ಸರಿಯಲ್ಲ. ನಾನು ಬೇಕಾದರೆ ಉಡುಪಿಗೆ ಹೋಗಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದು ಶಾಸಕಿ ಖನೀಜ್‌ ಫಾತಿಮಾ ಹೇಳಿದ್ದಾರೆ.

Share Post