Districts

ಹುಬ್ಬಳ್ಳಿ ಗಲಭೆ ಪ್ರಕರಣ; ಮೌಲ್ವಿ ವಸೀಂ ಪಠಾಣ್‌ ಪೊಲೀಸ್‌ ವಶಕ್ಕೆ

ಹುಬ್ಬಳ್ಳಿ: ಬೆಳಗ್ಗೆಯಷ್ಟೇ ಹುಬ್ಬಳ್ಳಿ ಗಲಭೆಯಲ್ಲಿ ತನ್ನದೇನೂ ತಪ್ಪಿಲ್ಲ ಎಂದು ಸಮಜಾಯಿಷಿ ನೀಡಿ ವಿಡಿಯೋ ಸಂದೇಶ ರವಾನಿಸಿದ್ದ ಮೌಲ್ವಿ ವಸೀಂ ಪಠಾಣ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಡಿಯೋ ಸಂದೇಶ ರವಾನಿಸಿದ ನಾಲ್ಕು ಗಂಟೆಯೊಳಗೆ ವಸೀಂ ಪಠಾಣ್‌ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಶನಿವಾರ ರಾತ್ರಿ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿದಾಗ ವಸೀಂ ಪಠಾಣ್‌ ಸ್ಥಳದಲ್ಲಿದ್ದರು. ಪೊಲೀಸ್‌ ಜೀಪ್‌ ಮೇಲೆ ಹತ್ತಿದ್ದರು. ಆದ್ರೆ ಪೊಲೀಸರು ಹೇಳಿದ್ದರಿಂದ ಜೀಪ್‌ ಮೇಲೆ ಹತ್ತಿದ್ದ. ಉದ್ರಿಕ್ತರನ್ನು ಸುಮ್ಮನಿರುವಂತೆ ಹೇಳುತ್ತಿದ್ದೆ ಎಂದು ವಸೀಂ ಪಠಾಣ್‌ ವಿಡಿಯೋದಲ್ಲಿ ಹೇಳಿದ್ದರು. ಆದ್ರೆ ವಸೀಂ ಪಠಾಣ್‌, ಗಲಭೆಗೆ ಪ್ರಚೋದನೆ ನೀಡಿದ್ದರು ಎಂಬ ಆರೋಪವಿದೆ. ಅವರ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ. ಅಂದಿನಿಂದ ತಲೆಮರೆಸಿಕೊಂಡಿದ್ದ ವಸೀಂ ಪಠಾಣ್‌, ಇದೀಗ ಪೊಲೀಸರ ಕೈಗೆ ಸಿಕ್ಕಿದ್ದು, ವಿಚಾರಣೆ ನಡೆಸಲಾಗುತ್ತಿದೆ.

Share Post