HIJAB ROW; ಚಿಕ್ಕಮಗಳೂರಿನಲ್ಲಿ ವಿದ್ಯಾರ್ಥಿನಿಯರ ಹೈಡ್ರಾಮಾ
ಚಿಕ್ಕಮಗಳೂರು; ಹಿಜಾಬ್ ವಿಚಾರ ಕೋರ್ಟ್‌ನಲ್ಲಿದೆ. ಅಂತಿಮ ಆದೇಶ ನೀಡುವವರೆಗೂ ಯಾವುದೇ ಧರ್ಮದ ಚಿನ್ಹೆಗಳೊಂದಿಗೆ ಕಾಲೇಜಿಗೆ ಬರುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಹೀಗಿದ್ದರೂ, ರಾಜ್ಯದ ಬಹುತೇಕ ಕಡೆ ವಿವಾದ ಮುಂದುವರೆದೇ ಇದೆ. ಚಿಕ್ಕಮಗಳೂರಿನ ಎಂಇಎಸ್ ಕಾಲೇಜಿನಲ್ಲೂ ಇದೇ ಗೊಂದಲ ಮುಂದುವರೆದಿದೆ.
ಕಾಲೇಜಿನ ಬಳಿ ಭದ್ರತೆ ಒದಗಿಸಲಾಗಿತ್ತು. ಹೀಗಿದ್ದರೂ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರು ಮುಚ್ಚಿದ ಗೇಟ್‌ನ್ನು ತೆಗೆದು ಒಳನುಗ್ಗಿದ್ದಾರೆ. ಹಿಜಾಬ್‌ನೊಂದಿಗೆ ಕಾಲೇಜು ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿದರು. ವೀ ವಾಂಟ್ ಜಸ್ಟೀಸ್ ಅಂತ ಕಾಲೇಜು ಆವರಣದಲ್ಲಿ ಘೋಷಣೆ ಕೂಗಿದರು.