National

ಇಕ್ರಿಸ್ಯಾಟ್‌ ಸುವರ್ಣ ಮಹೋತ್ಸವದಲ್ಲಿ ಮೋದಿ: ಲೋಗೋ, ಸ್ಟಾಂಪ್‌ ಲೋಕಾರ್ಪಣೆ

ತೆಲಂಗಾಣ:  ಸಂಗಾರೆಡ್ಡಿ ಜಿಲ್ಲೆಯ ಪಟಾನ್ ಚೆರುದಲ್ಲಿರುವ ಇಕ್ರಿಸ್ಯಾಟ್ ಸುವರ್ಣ ಮಹೋತ್ಸವದಲ್ಲಿ ಪ್ರಧಾನಿ ಮೋದಿ‌ ಭಾಗವಹಿಸಿ ಇಕ್ರಿಸ್ಯಾಟ್ನ ಹೊಸ ಲೋಗೋ ಮತ್ತು ಸ್ಟಾಂಪ್ ಅನ್ನ ಅನಾವರಣಗೊಳಿಸಿದರು. ರಾಪಿಡ್ ಜನರೇಷನ್ ಅಡ್ವಾನ್ಸ್‌ಮೆಂಟ್ ಸೌಲಭ್ಯವನ್ನು ಪ್ರಾರಂಭಿಸಿ, ವಿವಿಧ ಸಂಶೋಧನಾ ಕೇಂದ್ರಗಳನ್ನು ಲೋಕಾರ್ಪಣೆ ಮಾಡಿದ್ರು.   ಅಲ್ಲಿನ ಫೋಟೋ ಗ್ಯಾಲರಿ, ಸ್ಟಾಲ್‌ಗಳನ್ನು ಪರೀಕ್ಷಿಸಿ. ಛಾಯಾಚಿತ್ರ ಪ್ರದರ್ಶನಕ್ಕೆ ಭೇಟಿ ನೀಡಿದರು.

ಲೋಗೋ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಮೋದಿ ಕೃಷಿಯಲ್ಲಿ ಎಲ್ಲರೂ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಇಕ್ರಿಸ್ಯಾಟ್‌ ಕೆಲಸ ಮಾಡಿದೆ.  ಇಕ್ರಿಸ್ಯಾಟ್ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಹಕಾರ ನೀಡಿದೆ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಕೃಷಿ ನೀತಿಯನ್ನು ಹೇಗೆ ಬದಲಾಯಿಸಬಹುದು ಎಂಬುದನ್ನ ತಿಳಿಸಲಾಗಿದೆ.  ಈ 50 ವರ್ಷಗಳಲ್ಲಿ ಇಕ್ರಿಸ್ಯಾಟ್ ಹಲವು ಸಂಶೋಧನೆಗಳನ್ನು ಮಾಡಿಕೊಂಡು ಬಂದಿದೆ. 50 ವರ್ಷಗಳಿಂದ ಮಾಡುತ್ತಿರುವ ಸಂಶೋಧನೆಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ವಸಂತಪಂಚಮಿ ದಿನದಂದು ಸುವರ್ಣ ಮಹೋತ್ಸವ ಆಚರಿಸಲು ಸಂತಸವಾಗುತ್ತಿದೆ. 25 ವರ್ಷಗಳ ಗುರಿಯೊಂದಿಗೆ ವಿಶೇಷ ಯೋಜನೆಯೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ಇಕ್ರಿಸ್ಯಾಟ್ ಕೂಡ ನಿರ್ದಿಷ್ಟ ಗುರಿಗಳೊಂದಿಗೆ ಮುನ್ನಡೆಯಲು ಸಲಹೆ ನೀಡಿದೆ. ನಿಮಗೆ 50 ವರ್ಷಗಳ ಅನುಭವವಿದೆ, ನಿಮ್ಮ ಅನುಭವದ ಮೇರೆಗೆ ನೀರು ಮತ್ತು ಮಣ್ಣಿನ ನಿರ್ವಹಣೆಯ ಬಗ್ಗೆ ಅತ್ಯುತ್ತಮ ಸಂಶೋಧನೆಯನ್ನು ಮಾಡಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ರು.

ಇಕ್ರಿಸ್ಯಾಟ್ ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿದೆ. ದೇಶದಲ್ಲಿ ಶೇ.80 ರಷ್ಟು ಜನ ಸಣ್ಣ ಕೃಷಿಕರಿದ್ದಾರೆ. ಹವಾಮಾನ ಬದಲಾವಣೆ ಸಣ್ಣ ರೈತರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಹವಾಮಾನದ ಸವಾಲುಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ. ಹವಾಮಾನ ಬದಲಾವಣೆಗೆ ಅನುಗುಣವಾಗಿ ಕೃಷಿಯಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕು ಎಂಬ ಸಲಹೆಯನ್ನು ನೀಡಿದ್ರು.

ಇದಾದ ಬಳಿಕ ವಾಪಸ್‌ ಶಂಷಾಬಾದ್‌ ಏರ್‌ಪೋರ್ಟ್‌ಗೆ ಭೇಟಿ ನೀಡಿ ಅಲ್ಲಿಂದ ಮುಚ್ಚಿಂತಲ್‌ಗೆ ತೆರಳಲಿದ್ದಾರೆ. ಶ್ರೀ ರಮಾನುಜಚಾರ್ಯರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಮತ್ತೆ ದೆಹಲಿಗೆ ವಾಪಸಾಗಲಿದ್ದಾರೆ.

Share Post