Bengaluru

ವಿಮಾನದಲ್ಲಿ ಬಂದು ಮನೆಕಳವು; ಮೂವರು ಅಂತಾರಾಜ್ಯ ಕಳ್ಳರ ಬಂಧನ

ಬೆಂಗಳೂರು: ಬೆಂಗಳೂರು ಪೊಲೀಸರು ಮೂವರು ಅಂತಾರಾಜ್ಯ ಖತರ್ನಾಕ್‌ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತರಲ್ಲಿ ಇಬ್ಬರು ಮಹಾರಾಷ್ಟ್ರದವರಾಗಿದ್ದರೆ, ಮತ್ತೊಬ್ಬ ರಾಮನಗರ ಜಿಲ್ಲೆಯವನು ಎಂದು ತಿಳಿದುಬಂದಿದೆ. ಮಹಾರಾಷ್ಟ್ರ ಮೂಲದ ಬಿಲಾಲ್‌ ಮಂಡಲ್‌, ಸಲೀಂ ಹಾಗೂ ರಾಮನಗರ ಜಿಲ್ಲೆಯ ವಿನೋದ್‌ ರಾಜ್‌ ಬಂಧಿತ ಆರೋಪಿಗಳು.

ಜೈಲಿನಲ್ಲಿದ್ದಾಗ ಬಿಲಾಲ್‌ ಮಂಡಲ್‌ ಹಾಗೂ ಸಲೀಂಗೆ ವಿನೋದ್‌ ರಾಜ್‌ ಪರಿಚಯವಾಗಿದ್ದ. ಅನಂತರ ಬಿಲಾಲ್‌ ಎಂಬಾತನೇ ವಿನೋದ್‌ ರಾಜ್‌ ಜಾಮೀನು ಕೊಡಿಸಿದ್ದ. ಅನಂತರ ವಿನೋದ್‌ ಬೆಂಗಳೂರಿನಲ್ಲಿ ಸುತ್ತಾಡಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ, ಬಿಲಾಲ್‌ ಹಾಗೂ ಸಲೀಂಗೆ ಮಾಹಿತಿ ನೀಡುತ್ತಿದ್ದ. ಅನಂತರ ಬಿಲಾಲ್‌ ಹಾಗೂ ಸಲೀಂ ಮುಂಬೈನಿಂದ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಹೊಂಚು ಹಾಕಿ ಬೀಗ ಹಾಕಿದ್ದ ಮನೆಗಳಿಗೆ ಕನ್ನ ಹಾಕಿ, ನಗ ನಾಣ್ಯ ದೋಚಿ ಪರಾರಿಯಾಗುತ್ತಿದ್ದರು.

ಸದ್ಯ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ. ಬಂಧಿತರಿಂದ 25 ಲಕ್ಷ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಎಲ್ಲೆಲ್ಲಿ ಕಳ್ಳತನ ಮಾಡಿದ್ದಾರೆ ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ.

 

Share Post