Districts

ಜೆಡಿಎಸ್‌ ಜನತಾ ಜಲಧಾರೆ ಯಾತ್ರೆಗೆ ಮಾಜಿ ಪ್ರಧಾನಿ ದೇವೇಗೌಡ ಚಾಲನೆ

ಮೈಸೂರು: ರಾಜ್ಯದಲ್ಲಿನ ನೀರಾವರಿ ಯೋಜನೆಗಳ ಸಮರ್ಪಕ ಜಾರಿಗೆ ಆಗ್ರಹಿಸಿ ಹಾಗೂ ಜಲಸಂಕ್ಷಣೆ ಹೆಸರಿನಲ್ಲಿ ಜೆಡಿಎಸ್‌ ಪಕ್ಷ ಜನತಾ ಜಲಧಾರೆ ಯಾತ್ರೆ ಹಮ್ಮಿಕೊಂಡಿದೆ. ಇಂದು ಈ ಯಾತ್ರೆಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ‌ ಜಲಾಶಯದ ಬಳಿ ಚಾಲನೆ ನೀಡಿದರು. ಕಬಿನಿ ಜಲಾಶಯದ ಮುಖ್ಯದ್ವಾರದ ಬಳಿ ತೆರಳಿದ ಅವರು ಪೂಜೆಯಲ್ಲಿ ಪಾಲ್ಗೊಂಡರು. ಕಬಿನಿ ನೀರನ್ನು ಜಲಧಾರೆ ವಾಹನದ ಕಳಶಕ್ಕೆ ಸುರಿದು ಯಾತ್ರೆಗೆ ಚಾಲನೆ ನೀಡಿದರು.

ಬೆಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ಎಚ್.ಡಿ.ಕೋಟೆಯ ಬೀಚನಹಳ್ಳಿಗೆ ಬಂದಿಳಿದ ದೇವೇಗೌಡರು, ಬೀಚನಹಳ್ಳಿ ಶಾಲೆಯ ಆವರಣದಲ್ಲಿ ಆಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಪಕ್ಷದ ಮುಖಂಡರು ಸೇರಿ ಅತ್ಯಂತ ಶ್ರೇಷ್ಠ ಕಾರ್ಯ ಕೈಗೊಂಡಿದ್ದಾರೆ. ಅದನ್ನು ಕಬಿನಿ ಜಲಾಶಯದಿಂದಲೇ ಪ್ರಾರಂಭ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಅನೇಕ ನದಿ, ಉಪನದಿಗಳು ಇವೆ.‌ ದುರಂತ ಎಂದರೆ ನಮ್ಮ ಭೂಪ್ರದೇಶದಲ್ಲಿ ಲಭಿಸುವ ನೀರು ಸಂಗ್ರಹ ಮಾಡಿ ಕುಡಿಯಲು, ವ್ಯವಸಾಯಕ್ಕೆ ಬಳಸಲು ಶಕ್ತರಾಗಿಲ್ಲ. ರಾಜ್ಯದ 6.5 ಕೋಟಿ ಜನರ ಸಮಸ್ಯೆ ಬಗೆಹರಿಸುವುದು ನಮ್ನ ಉದ್ದೇಶವಾಗಿದೆ. ಈ ಕಾರ್ಯಕ್ರಮ ಎಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಕೂಸು ಎಂದು ಹೇಳಿದರು.

Share Post