CrimeDistricts

 ಮಂಗಳೂರು ಎಲೆಕ್ಟ್ರಿಕ್ ಸ್ಕೂಟರ್‌ ಶೋರೂಂ ಬೆಂಕಿಗಾಹುತಿ

ಮಂಗಳೂರು; ಇಲ್ಲಿನ ನಾಗುರಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಶೋರೂಂ ಒಂದು ಬೆಂಕಿಗಾಹುತಿಯಾಗಿದೆ. ಒಕಿನಾವ ಕಂಪನಿಯ ಎಲೆಕ್ಟ್ರಿಕ್‌ ಸ್ಕೂಟರ್ ಶೋ ರೂಂನಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಶೋರೂಂ ಹೊತ್ತಿ ಉರಿದಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಶೋ ರೂಂನಲ್ಲಿದ್ದ 10ಕ್ಕೂ ಹೆಚ್ಚು ಸ್ಕೂಟರ್‌ಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನಿನ್ನೆ ರಾತ್ರಿ ಸ್ಕೂಟರ್‌ಗಳ ಬ್ಯಾಟರಿಯನ್ನು ಶೋರೂಮ್ ಸಿಬ್ಬಂದಿ ಚಾರ್ಜ್ ಮಾಡಲು ಇಟ್ಟಿದ್ದರು. ಅದರಲ್ಲಿ ಕಿಡಿ ಉಂಟಾಗಿ ಇಡೀ ಶೋರೂಮ್ ಹೊತ್ತಿ ಉರಿದಿದೆ.

Share Post