ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಹುಸಿ ಬಾಂಬ್ ಕರೆ
ಚಿಕ್ಕಬಳ್ಳಾಪುರ : ದೆಹಲಿ ಮತ್ತು ಕರ್ನಾಟಕ ನಡುವೆ ಸಂಚರಿಸುವ ಕೆಕೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ಹುಸಿ ಕರೆ ಬಂದಿದೆ. ಬಾಂಬ್ ನಿಷ್ಕ್ರಿಯ ದಳ, ರೈಲ್ವೆ ಮತ್ತು ಪೊಲೀಸ್ ಅಧಿಕಾರಿಗಳು ತಪಾಸಣೆಯಲ್ಲಿ ನಿರತರಾಗಿದ್ದಾರೆ.
ರಾಯಚೂರಿನ ವಾಡಿಯಲ್ಲಿ ಹುಸಿ ಕರೆ ಮಾಡಿದವನನ್ನು ಈಗಾಗಲೇ ಬಂಧಿಸಲಾಗಿದೆ. ರೈಲನ್ನು ನಿಲ್ಲಿಸಿ ತಪಾಸಣೆ ಮಾಡಿದರೆ ಜನರು ಗಾಬರಿಗೊಳ್ಳುತ್ತಾರೆ ಎಂಬ ಕಾರಣಕ್ಕೆ ಸಂಚರಿಸುವ ರೈಲಲ್ಲೇ ತಪಾಸಣೆ ನಡೆದಿದೆ.
ಹುಸಿ ಕರೆ ಆಗಿದ್ದರೂ ಕೂಡ ಪೂರ್ತಿ ತಪಾಸಣೆ ಮಾಡಲಾಗ್ತಿದೆ.