CrimeHealth

ಬರ್ಡ್‌ ಫ್ಲೂ ಫೋಬಿಯಾ: ಸಾವಿರಾರು ಕೋಳಿಗಳ ಮಾರಣ ಹೋಮ

ಕೇರಳ: ಕೊಟ್ಟಾಯಂ ಜಿಲ್ಲೆಯಲ್ಲಿ ಬರ್ಡ್‌ ಫ್ಲೂ ಖಾಯಿಲೆ ಜನ ಮತ್ತು ಅಧಿಕಾರಿಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಹಕ್ಕಿ ಜ್ವರಕ್ಕೆ ಹೆದರಿ ಸಾವಿರಾರು ಕೋಳಿ ಹಾಗೂ ಬಾತುಕೋಳಿಗಳ ಮಾರಣ ಹೋಮ ನಡೆದಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ ಮೂರು ಕೇಸ್‌ ದಾಖಲಾಗ್ತಿದ್ದಂತೆ ಇದನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಕೂಡಲೇ ಆಯಾ ಪ್ರದೇಶಗಳಲ್ಲಿ ಕೋಳಿಗಳನ್ನು ಕೊಂದು ದಹನ ಮಾಡುವಂತೆ ಆದೇಶಿಸಿದ್ರು. ವೈರಸ್‌ ವಿರುದ್ಧ ಹೋರಾಡಲು ಕಠಿಣ ಕ್ರಮಗಳ ಅನುಸರಣೆಗಾಗಿ ಜಿಲ್ಲಾಧಿಕಾರಿ ಡಾ.ಪಿ.ಕೆ.ಜಯಶ್ರೀ ಇಂದು ಸಭೆ ಕರೆದಿದ್ದಾರೆ. ಹಕ್ಕಿ ಜ್ವರದ ಭೀತಿಯಿಂದಾಗಿ ಕೋಳಿ ಸಾಕಾಣಿಕೆ ರೈತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

Share Post