CrimeDistricts

ಪ್ರತಿಯೊಬ್ಬರು ಮನೆಯಲ್ಲಿ ತಲ್ವಾರ್ ಇಡಬೇಕು; ಮುತಾಲಿಕ್ ವಿವಾದ

ಬೆಳಗಾವಿ; ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮತ್ತ ತಮ್ಮನಾಲಿಗೆ ಹಿಬಿಟ್ಟಿದ್ದಾರೆ . ವಿವಾದಾತ್ಮ ಹೇಳಿಕೆ ನೀಡುವ ಮೂಲಕ ಸದಾ ಸುದ್ದಿಯಲ್ಲಿ ಚಾಲ್ತಿಯಲ್ಲಿ ಇರುತ್ತಾರೆ.ಮುತಾಲಿಕ್ ಈ ಹಿಂದೆ ಬೆಳಗಾವಿಯಲ್ಲಿ ನಡೆದ ವಿರಾಟ ಹಿಂದೂ ಸಮಾವೇಶದಲ್ಲಿ ನಡೆದ ಸಮಯದಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ತಲ್ವಾರ್ ಇಡಬೇಕು ಎಂದು ಹೇಳಿಕೆ ನೀಡಿದ್ದರು. ಈಗ ಮತ್ತೊಮ್ಮ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಜನವರಿ ೧೨ರಂದು ಕಲಬುರಗಿಯ ಯಡ್ರಾಮಿಯಲ್ಲಿ ನಡೆದ ಹಿಂದೂ ಸಂತ ಸಮಾವೇಶದಲ್ಲಿ ತಮ್ಮ ನಾಲಿಗೆ ಹರಿಬಿಟ್ಟದ್ದಾರೆ ಸಮಾವೇಶವನ್ನು ಉದ್ದೆಶಿಸಿ ಮಾತನಾಡುವಾಗ ಹಿಂದೂಗಳು ತಮ್ಮ ತಮ್ಮ ಮನೆಯಲ್ಲಿ ತಲ್ವಾರ್ ಅನ್ನು ಕಾಣುವ ರೀತಿಯಲ್ಲೇ ಇಡಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಹಿಂದೂ ಸಂತ ಸಮಾವೇಶದಲ್ಲಿ ಮಾತನಾಡಿದ ಅವರು ಮೊದಲು ಹಿಂದುಗಳು ಆಯುಧಗಳನ್ನು ಪೂಜಿಸುತಿದ್ದೆವು. ಇದೀಗ ನಾವು ಪುಸ್ತಕ, ಪೆನ್ನು, ವಾಹನಗಳನ್ನು ಪೂಜಿಸುತಿದ್ದೆವೆ. ಪೊಲೀಸ್ ಠಾಣೆಯಲ್ಲಿ ಪೋಲೀಸರು ಎಫ್ಐಆರ್ಗೆ ಪೂಜೆ ಮಾಡುವುದಿಲ್ಲ. ಪೊಲೀಸರು ಠಾಣೆಯಲ್ಲಿ ಬಂದೂಕಿಗೆ ಪೂಜೆ ಮಾಡುತ್ತಾರೆ ತಾನೆ? ಹೀಗಿರುವಾಗ ಇನ್ನುಮುಂದೆ ತಲ್ವಾರ್, ಚಾಕು, ಕೊಡಲಿ ಇಟ್ಟು ಪೂಜೆ ಮಾಡಬೇಕು ನಾವು,ಮನೆಯಲ್ಲಿ ಒಂದು ತಲ್ವಾರ್ ಇಡುವುದು ಅಪರಾಧವೇನಲ್ಲ
ಮನೆಗಳಲ್ಲಿ ತಲ್ವಾರ್ ಇಟ್ಟಿದ್ದಕ್ಕೆ ಪೊಲೀಸರು ಕೇಸ್ ಹಾಕುತ್ತೇವೆ ಅಂತ ಹೆದರಿಸಿದರೆ ಅವರಿಗೆ ಹೇಳಿ, ಮೊದಲು ಶಸ್ತ್ರ ಹಿಡಿದು ನಿಂತಿರುವ ಕಾಳಿ, ದುರ್ಗೆ, ಹನುಮಂತ, ರಾಮನ ಮೇಲೆ ಕೇಸ್ ಹಾಕಿ. ಮನೆಯಲ್ಲಿ ತಲ್ವಾರ್ ಇಟ್ಟರೆ ಯಾರು ನಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕೋದಿಲ್ಲ. ತಲ್ವಾರ್ ಇಡೋದು ಹಲ್ಲೆ ಅಥವಾ ದಾಳಿ ಮಾಡುವ ಉದ್ದೇಶದಿಂದಾಗಿ ಅಲ್ಲ ನಮ್ಮ ಧರ್ಮದ ರಕ್ಷಣೆ ಮತ್ತ ನಮ್ಮ ದೇಶದ ರಕ್ಷಣೆಗಾಗಿ ಮನೆ ಮನೆಗಳಲ್ಲಿ ತಲ್ವಾರ್ ಇಡಬೇಕು ಎಂಬ ಹೇಳಿ ನೀಡಿದ್ದಾರೆ.

Share Post