3 ದಿನಗಳ ಬಳಿಕ ಸದನಕ್ಕೆ ಬಂದ ಈಶ್ವರಪ್ಪ ಜಾರಕಿಹೊಳಿ; ಏನು ಹೇಳಿದ್ರು ಗೊತ್ತಾ..?
ಬೆಳಗಾವಿ; ಮೂರು ದಿನಗಳ ನಂತರ ಮುನಿಸು ಬದಿಗೊತ್ತಿ ಮಾಜಿ ಸಚಿವರಾದ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಕಲಾಪಕ್ಕೆ ಹಾಜರಾಗಿದ್ದಾರೆ. ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಇಬ್ಬರೂ ಗುಪ್ತ ಮಾತುಕತೆ ನಡೆಸಿದ ನಂತರ ಸದನಕ್ಕೆ ಹಾಜರಾದರು. ಈ ವೇಳೆ ರಮೇಶ್ ಜಾರಕಿ ಹೊಳಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ನೊ ಕಮೆಂಟ್ಸ್ ಎನ್ನುತ್ತಾ ಒಳ ನಡೆದರು. ಆದರೆ ಈಶ್ವರಪ್ಪ ಮಾತನಾಡಿ, ಬಿಜೆಪಿ ವಿಶ್ವಾಸದ ಮೇಲೆ ನಂಬಿಕೆ ಇಟ್ಟಿರುವ ಪಕ್ಷ. ಸಿಎಂ ಬೊಮ್ಮಾಯಿ ಮತ್ತು ಪಕ್ಷದ ಮೇಲೆ ನಮಗೆ ನಂಬಿಕೆ ಇದೆ. ಹೀಗಾಗಿ, ಇಂದು ಸದನಕ್ಕೆ ಹಾಜರಾಗ್ತಿದ್ದೇವೆ ಅಂತ ಹೇಳಿದ್ದಾರೆ.
ನಮ್ಮ ಮೇಲಿನ ಆರೋಪಕ್ಕೆ ಕ್ಲೀನ್ಚಿಟ್ ಸಿಕ್ಕಿದೆ. ಆದರೂ ಯಾಕೆ ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಅಂತ ರಾಜ್ಯದ ಜನರು, ಕಾರ್ಯಕರ್ತರು ಪ್ರಶ್ನಿಸ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.