Districts

ವಿಜಯಪುರ ಜಿಲ್ಲೆಯಲ್ಲಿ ಹತ್ತು ಸೆಕೆಂಡ್‌ ಕಂಪಿಸಿದ ಭೂಮಿ; 4.9 ತೀವ್ರತೆ ದಾಖಲು

ವಿಜಯಪುರ; ರಾಜ್ಯದಲ್ಲಿ ಪದೇ ಪದೇ ಲಘು ಭೂಕಂಪನಗಳು ಸಂಭವಿಸುತ್ತಲೇ ಇವೆ. ಇಂದು ಬೆಳಗ್ಗೆ ವಿಜಯಪುರ ಜಿಲ್ಲೆಯ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಗ್ಗೆ 6.22ರಿಂದ 6.23ರ ನಡುವೆ ಭೂಮಿ ಕಂಪಿಸಿದ್ದು, ಈ ವೇಳೆ ಭಾರಿ ಶಬ್ದ ಕೂಡಾ ಕೇಳಿಬಂದಿದೆ. ಇದ್ರಿಂದ ಜನ ಬೆಚ್ಚಿಬಿದ್ದಿದ್ದಾರೆ.

ಬೆಳಗ್ಗೆ 6.22ಕ್ಕೆ ವಿಜಯಪುರ ನಗರ ಕೇಂದ್ರಿತವಾಗಿ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.9 ರಷ್ಟು ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಖಚಿತಪಡಿಸಿದೆ. 9.9 ಕಿ.ಮೀ. ಭೂಮಿಯ ಆಳದಲ್ಲಿ ಭೂಕಂಪನ ಸಂಭವಿಸಿದೆ. ವಿಜಯಪುರ ನಗರ ಸೇರಿದಂತೆ ಬಸವನ ಬಾಗೇವಾಡಿ, ತಿಕೋಟಾ, ಬಬಲೇಶ್ವರ, ಜಮಖಂಡಿ, ಹೊರ್ತಿ, ನೆರೆಯ ಮಹಾರಾಷ್ಟ್ರದ ಸೋಲಾಪುರ, ಪುಣೆ, ಪಂಢರಪುರದಲ್ಲೂ ಭೂಕಂಪನದ ಅನುಭವವಾಗಿದೆ.

Share Post