Districts

ಯಾದಗಿರಿ: ಒಂದೇ ಶಾಲೆಯ 75 ಮಂದಿಗೆ ಕೋವಿಡ್‌ ಸೋಂಕು

ಯಾದಗಿರಿ : ಜಿಲ್ಲೆಯ ಶಹಾಪುರ ತಾಲ್ಲೂಕಿನ ಹೊತಪೇಟ ಗ್ರಾಮದ ಬಳಿ ಇರುವ ನವೋದಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು , ಸಿಬ್ಬಂದಿ ಸೇರಿ  75 ಜನರಿಗೆ ಇಂದು ಕೋವಿಡ್‌ ದೃಡಪಟ್ಟಿದೆ. ಒಂದೇ ಶಾಲೆಯಲ್ಲಿ ಇಷ್ಟೋಂದು ಕೇಸ್‌ಗಳು ಬಂದಿರುವುದು ನಿಜಕ್ಕೂ ಆ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದೆ.

ಶೀತಗಾಳಿ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿದ್ದು ಕೆಮ್ಮು ಜ್ವರ ಕಾಣಿಸಿಕೊಂಡಿದೆ. ಪರೀಕ್ಷೆಗೆ ತೊಡಗಿಸಿದಾಗ ಕೋವಿಡ್‌ ಇರುವುದು ಗೊತ್ತಾಗಿದೆ. ಈ ಮಹಾ ವಿದ್ಯಾಲಯದಲ್ಲಿ ಪೂರ್ಣಕಾಲಿಕ ಸ್ಟಾಫ್‌ ನರ್ಸ್‌ ಇಲ್ಲ ಹಾಗಾಗಿ ಮಕ್ಕಳ ಆರೋಗ್ಯದಲ್ಲಿ ಆಗಾಗ್ಗೆ ಏರುಪೇರುಗಳು ಕಾಣಿಸಿಕೊಳ್ಳುತ್ತಿರುತ್ತದೆ ಎಂದು ಪೋಷಕರು ದೂರಿದ್ದಾರೆ.

363 ನಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು ಅದರಲ್ಲಿ 75 ಜನರಿಗೆ ಸೋಂಕು ಇರುವುದು ತಿಳಿದ ಕೂಡಲೇ ಅವರೆಲ್ಲರನ್ನು ಐಸೋಲೇಟ್‌ ಮಾಡಲಾಗಿದೆ. ಆದರೂ ಕೆಲವು ಪೋಷಕರು ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಸೂಕ್ತ ಕ್ರಮಗಳನ್ನು ಕೈಗೊಂಡು ಮಕ್ಕಳಿಗೆ ಅವಶ್ಯ ಸೇವೆಗಳ  ವ್ಯವಸ್ಥೆ ಮಾಡಬೇಕು  ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ

Share Post