Districts

ಲಾಂಗ್‌ ಹಿಡಿದು ಡ್ಯಾನ್ಸ್‌ ಮಾಡಿದ ಮಾಜಿ ಮೇಯರ್‌

ದಾವಣಗೆರೆ: ಊರಹಬ್ಬದಲ್ಲಿ ಲಾಂಗ್ ಹಡಿದು ಟಗರು ಬಂತು ಟಗರು ಹಾಡಿಗೆ ಮಾಜಿ ಮೇಯರ್‌ ಸ್ಟೆಪ್ಸ್‌ ಹಾಕಿ ವಿವಾದಕ್ಕೆ ಕಾರಣವಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗರೆ ಮಹಾನಗರ ಪಾಲಿಕೆ ಮೇಯರ್‌ ಅಜಯ್‌ ಕುಮಾರ್‌ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದ ಊರ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಜಯ್‌ ಕುಮಾರ್‌ ಲಾಂಗ್‌ ಹಿಡಿದು ಹಾಡಿಗೆ ಸ್ಟೆಪ್ಸ್‌ ಹಾಕಿದ್ದರು. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ. 

 ಏಪ್ರಿಲ್‌ 3 ರಂದು ಬನ್ನಿಕೋಡು ಗ್ರಾಮದಲ್ಲಿ ಊರ ಹಬ್ಬ ನಡೆದಿತ್ತು.  ಅಜಯ್ ಕುಮಾರ್ ಊರ ಜನರ ಒತ್ತಾಯದ ಹಿನ್ನೆಲೆಯಲ್ಲಿ ಡ್ಯಾನ್ಸ್‌ ಮಾಡಿದ್ದು, ಈ ವೇಳೆ ಲಾಂಗ್‌ ಪ್ರದರ್ಶಿಸಿದ್ದಾರೆ.  ಟ್ರ್ಯಾಕ್ಟರ್ ಮೇಲೆ ನಿಂತು ಸಾರ್ವಜನಿಕವಾಗಿ ಲಾಂಗ್‌ ತೋರಿಸಿದ ಅಜಯ್ ಕುಮಾರ್ ಅದೇ ಟ್ರ್ಯಾಕ್ಟರ್ ಮೇಲೆ‌ ನಿಂತು ಮೈ ಚಳಿಬಿಟ್ಟು ಕುಣಿದಿದ್ದಾರೆ.

Share Post