Districts

ನಾಟಿ ವೈದ್ಯನಿಂದ ಸಿಎಂ ಬೊಮ್ಮಾಯಿಗೆ ಚಿಕಿತ್ಸೆ

ಬೆಳಗಾವಿ : ಸಿಎಂ ಬೊಮ್ಮಾಯಿ ಅವರು ಕೆಲದಿನಗಳಿಂದ ಮಂಡಿ ನೋವಿನಿಂದ ಬಳುತ್ತಿದ್ದರು. ಮಂಡಿ ನೋವಿಗೆ ಮೈಸೂರಿನ ಪ್ರಖ್ಯಾತ ನಾಟಿ ವೈದ್ಯನಿಂದ ಚಿಕಿತ್ಸೆ ಪಡೆದಿದ್ದಾರೆ.

ಮಂಡಿ ನೋವಿನ ಶಸ್ತ್ರಚಿಕಿತ್ಸೆಗೆ ಮುಖ್ಯಮಂತ್ರಿಗಳು ಅಮೇರಿಕಾ ತೆರಳಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡಿತ್ತು. ಈಗ ಅವರು ನಾಟಿ ವೈದ್ಯನಿಂದ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಇದೀಗ ವೈರಲ್‌ ಆಗಿದೆ.

ಲಕ್ಷ್ಮಣ್‌ ಸವದಿ ಅವರಿಗೆ ಚಿಕಿತ್ಸೆ ನೀಡಿದ್ದ ಲೋಕೇಶ್‌ ಟೇಕಲ್‌ ಅವರನ್ನು ಸಂಪರ್ಕಿಸಿ ಮುಖ್ಯಮಂತ್ರಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಈಗಾಗಲೇ ಲೋಕೇಶ್ ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಬ್ಲಾಕ್ ಫಂಗಸ್‌ಗೆ ಒಳಗಾದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದು, ಈ ವಿಷಯವನ್ನು ಲಕ್ಷಣ ಸವದಿ ಮೊನ್ನೆ ಮೆಲ್ಮನೆಯಲ್ಲಿ ಪ್ರಸ್ತಾಪಿಸಿದ್ದರು

Share Post