CrimeNational

ದೇಶದ ವಿವಿಧೆಡೆ ಸಿಬಿಐ, ಎನ್‌ಸಿಬಿ ದಾಳಿ; 175 ಮಂದಿ ಅರೆಸ್ಟ್‌

ನವದೆಹಲಿ; ಡ್ರಗ್ಸ್‌ ಪೆಡ್ಲರ್‌ಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಸಿಬಿಐ, ಎನ್‌ಸಿಬಿ ಜತೆಗೂಡಿ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, 175 ಆರೋಪಿಗಳನ್ನು ಬಂಧಿಸಲಾಗಿದೆ. ಭಾರಿ ಪ್ರಮಾಣದ ಡ್ರಗ್ಸ್‌ ಜಪ್ತಿ ಮಾಡಲಾಗಿದ್ದು, 127 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್‌, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಹಾಗೂ ಮಣಿಪುರಗಳಲ್ಲಿ ಕೈಗೊಂಡಿರುವ ಶೋಧ ಕಾರ್ಯ ನಡೆಸಲಾಯಿತು. ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದಾರೆ ಎನ್ನಲಾದ 6,600 ಶಂಕಿತರ ಚಲನವಲನಗಳ ಮೇಲೆ ನಿಗಾ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 5.125 ಕೆಜಿ ಹೆರಾಯಿನ್, 33.936 ಕೆಜಿ ಗಾಂಜಾ, 3.29 ಕೆಜಿ ಚರಸ್, 1,365 ಗ್ರಾಂ ಮೆಫೆಡ್ರೊನ್, 946 ಅಲ್ಪ್ರಾಝೋಲಂ ಮಾತ್ರೆಗಳು, 0.9 ಗ್ರಾಮ ಎಕ್‌ಸ್ಟಸಿ ಮಾತ್ರೆಗಳು, 1,150 ಕೆಜಿ ಅಫೀಮು ಸೇರಿದಂತೆ ವಿವಿಧ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರ ತಿಳಿಸಿದ್ದಾರೆ.

Share Post