ಮಹಾರಾಷ್ಟ್ರ 44 ಹಳ್ಳಿ ರಾಜ್ಯಕ್ಕೆ ಸೇರಬೇಕು; ಸಿಎಂ ಬೊಮ್ಮಾಯಿ ಹೇಳಿಕೆಗೆ ಬೆಂಬಲ
ಬೆಳಗಾವಿ; ಮಹಾರಾಷ್ಟ್ರದ ಅಕ್ಕಲಕೋಟ, ಜತ್ ಹಾಗೂ ಸೊಲ್ಲಾಪುರಗಳು ಕರ್ನಾಟಕಕ್ಕೆ ಸೇರಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ಇದಕ್ಕೆ ಗಡಿ ಭಾಗದ ಕನ್ನಡಿಗರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಜತ್ ತಾಲೂಕಿನ ಕನ್ನಡ ಹೋರಾಟಗಾರ ಮಹದೇವ ಅಂಕಲಗಿ ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಬೆಂಬಲ ಸೂಚಿಸಿದ್ದಾರೆ. 44 ಹಳ್ಳಿಗಳ ಪರ ಮುಖ್ಯಮಂತ್ರಿ ಬೊಮ್ಮಾಯಿಯವರು ಮಾತನಾಡಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆ, ಜೊತೆಗೆ ಈ ಬಗ್ಗೆ ಮಾತನಾಡಿದ್ದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ಮಹಾಜನ್ ವರದಿ ಪ್ರಕಾರ ಜತ್ ತಾಲೂಕಿನ 44 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು. ನಾವು ಮಹಾರಾಷ್ಟ್ರದಲ್ಲಿದ್ದರೂ ನಮ್ಮ ಮೇಲೆ ಪ್ರೇಮ ತೋರಿಸಿದ್ದೀರಿ ಎಂದು ಮಹದೇವ ಅಂಕಲಗಿ ಅವರು ಖುಷಿ ವ್ಯಕ್ತಪಡಿಸಿದ್ದಾರೆ.