ನಟಿ ರಾಗಿಣಿ ಯೋಗಾ ಮಾಡುವ ಫೋಟೋಗಳು ವೈರಲ್
ಬೆಂಗಳೂರು; ಇಂದು ವಿಶ್ವ ಯೋಗಾ ದಿನಾಚರಣೆ. ಈ ಹಿನ್ನೆಲೆಯಲ್ಲಿ ಹಲವು ಗಣ್ಯರು ತಾವು ಯೋಗಾ ಮಾಡುವ ಫೋಟೋಗಳನ್ನು ಸಾಮಾಜಿಕ ಜಾಲತಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ನಟಿ ರಾಗಿಣಿ ದ್ವಿವೇದಿ ಕೂಡಾ ಫೋಟೋಗಳನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿವೆ.
ರಾಗಿಣಿಯವರು ಇತ್ತೀಚೆಗೆ ಆರೋಗ್ಯದ ಕಡೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದಕ್ಕಾಗಿ ಅವರು ಯೋಗದ ಮೊರೆ ಹೋಗಿದ್ದಾರೆ. ಅವರು ಯೋಗಾ ಮಾಡುವ ಫೋಟೋಗಳನ್ನು ರಾಗಿಣಿ ಹಂಚಿಕೊಂಡಿದ್ದಾರೆ. ರಾಗಿಣಿ ಯೋಗ ಲುಕ್ ಸಖತ್ ಗ್ಲಾಮರಸ್ ಆಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.