DistrictsPolitics

ʻಕೈʼ ಟಿಕೆಟ್‌ ಆಕಾಂಕ್ಷಿ ವಿರುದ್ಧವೇ ಕಾರ್ಯಕರ್ತರ ದೂರು

ಮಂಡ್ಯ; ಚುನಾವಣೆಗೂ ಮುನ್ನವೇ ಸಕ್ಕರೆ ನಾಡು ಮಂಡ್ಯದಲ್ಲಿ ಕಾಂಗ್ರೆಸ್ ನಲ್ಲಿ ಭಿನ್ನಮತ ಎದ್ದಿದೆ.
ಮಂಡ್ಯ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ಹೆಚ್.ಕೃಷ್ಣ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ.

ಡಾ.ಕೃಷ್ಣ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ದೂರು ನೀಡಿದ್ದಾರೆ. ಕಾರ್ಮಿಕವಿಭಾಗದಿಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ದೂರು ನೀಡಿ ಮಂಡ್ಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ,ಪದಾಧಿಕಾರಿಗಳು, ಕಾರ್ಮಿಕರಿಗೆ ಅಪಮಾನ ಮಾಡಿದ್ದಾರೆ.ಡಾ.ಕೃಷ್ಣ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದ ಕಾರ್ಯಕರ್ತರು. ತಕ್ಷಣವೇ ಡಾ.ಕೃಷ್ಣ ವಿರುದ್ದ ಕ್ರಮ ವಹಿಸಲು ಕಾರ್ಯಕರ್ತರು ಮನವಿ ಮಾಡಿದ್ದಾರೆ ಕಾರ್ಯಕರ್ತರು. ಪ್ರಜಾಧ್ವನಿ ಸಮಾವೇಶದ ಬಳಿಕ ಡಾ.ಕೃಷ್ಣ ವಿರುದ್ದ ಅಸಮಾಧಾನಗೊಂಡಿದ್ದಾರೆ.

Share Post