CrimeDistricts

9 ಇಂಚು ಜಾಗಕ್ಕಾಗಿ ನಡೆದುಹೋಯ್ತು ಕೊಲೆ; ಕೋಲಾರದಲ್ಲಿ ನಡೆದಿದ್ದಾರೂ ಏನು..?

ಕೋಲಾರ; ಕೇವಲ ಒಂಬತ್ತು ಇಂಚು ಜಾಗಕ್ಕಾಗಿ ಕೋಲಾರದಲ್ಲಿ ಕೊಲೆ ನಡೆದಿದೆ. ಇಲ್ಲಿನ ಇದ್ರೀಸ್‌ ಸಾಬ್‌ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಮುಜುಮಿಲ್‌ ಪಾಷಾ ಎಂಬಾತನೇ ಕೊಲೆಯಾದ ದುರ್ದೈವಿ. ಕೊಲೆಯಾದ ಮುಜುಮಿಲ್‌ ಪಾಷಾ ಅವರ ತಂದೆ ಮನೆ ನಿರ್ಮಾಣ ಮಾಡಿದ್ದು, ಮನೆಯ ಕಿಟಕಿಯ ಸಜ್ಜಾ 9 ಇಂಚು ಹೆಚ್ಚಿಗೆ ನಿರ್ಮಾಣ ಮಾಡಿದ್ದರು. ಇದರಿಂದಾಗಿ ತೊಂದರೆಯಾಗುತ್ತಿದ್ದರು ಎಂದು ಪಕ್ಕದ ಮನೆಯವರು ಕ್ಯಾತೆ ತೆಗೆದಿದ್ದರು. ಇದರಿಂದಾಗಿ ಎರಡೂ ಕುಟುಂಬದ ನಡುವೆ ಜಗಳ ನಡೆದಿದೆ.

ಇದೇ ವಿಚಾರವಾಗಿ ನಡೆದ ಜಗಳ ತಾರಕಕ್ಕೇರಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ರೋಷನ್‌, ಜಮೀರ್‌, ನಬೀವುಲ್ಲಾ ಹಾಗೂ ಫಿರ್ದೋಸ್‌ ಎಂಬುವವರು ಈ ಕೊಲೆ ಮಾಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಕೋಲಾರ ನಗರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

 

Share Post