ಪ್ರಾಣ ಸ್ನೇಹಿತೆಯನ್ನು ಸಾಲದಿಂದ ಕಾಪಾಡಲು ಚಿನ್ನಾಭರಣ ಕಳ್ಳತನದ ನಾಟಕ; ಸಿಕ್ಕಿಬಿದ್ದಿದ್ದೇ ರೋಚಕ!
ರಾಯಚೂರು; ಸ್ನೇಹಕ್ಕಾಗಿ ಪ್ರಾಣವನ್ನೇ ಕೊಡುವವರಿದ್ದಾರೆ.. ಆದ್ರೆ ಇಲ್ಲಿ ಮಹಿಳೆಯೊಬ್ಬರು ಸ್ನೇಹಕ್ಕಾಗಿ ಕಳ್ಳತನದ ನಾಟಕ ಆಡಿದ್ದಾಳೆ.. ತನ್ನದೇ ಆಭರಣಗಳನ್ನು ಸಾಲ ಮಾಡಿಕೊಂಡಿದ್ದ ಸ್ನೇಹಿತೆಗೆ ಕೊಟ್ಟು, ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ನಾಟಕವಾಡಿದ್ದಾಳೆ.. ಕೊನೆಗೂ ಸಿಕ್ಕಿಬಿದ್ದು ಸಂಕಷ್ಟ ಅನುಭವಿಸುತ್ತಿದ್ದಾಳೆ.. ರಾಯಚೂರಿನ ಜಲಾಲ್ ನಗರದಲ್ಲಿ ಈ ಘಟನೆ ನಡೆದಿದೆ..
ಜಲಾಲ್ ನಗರದ ನಿವಾಸಿಗಳಾದ ರಾಜೇಶ್ವರಿ ಹಾಗೂ ರೇಣುಕಾ ಇಬ್ಬರು ಪ್ರಾಣ ಸ್ನೇಹಿತೆಯರು.. ಇದರಲ್ಲಿ ರೇಣುಕಾ ವಿಪರೀತ ಸಾಲ ಮಾಡಿಕೊಂಡಿದ್ದಳು.. ಅದೂ ಕೂಡಾ ರಾಜೇಶ್ವರಿ ಪತಿಯೇ ಈಕೆಗೆ ಹತ್ತು ಲಕ್ಷ ರೂಪಾಯಿ ಸಾಲ ಕೊಟ್ಟಿದ್ದ.. ಇದನ್ನು ತೀರಿಸೋದಕ್ಕೆ ಆಗದೇ ರೇಣುಕಾ ಒದ್ದಾಡುತ್ತಿದ್ದಳು.. ಇತ್ತ ರಾಜೇಶ್ವರಿಯೇ ಈ ಹಣ ಇಸ್ಕೊಟ್ಟಿದ್ದರಿಂದ ಗಂಡನಿಂದ ಬೈಗುಳ ಅನುಭವಿಸುತ್ತಿದ್ದಳು.. ಹೀಗಾಗಿ, ರಾಜೇಶ್ವರಿ ತನ್ನ ಬಳಿ ಇರುವ ಆಭರಣಗಳನ್ನು ಕೊಟ್ಟು ಅವುಗಳನ್ನು ಮಾರಿ ಸಾಲ ತೀರಿಸುವಂತೆ ರೇಣುಕಾಗೆ ಐಡಿಯಾ ಮಾಡಿಕೊಂಡಿದ್ದರು.
ಅನಂತರ ಇಬ್ಬರೂ ಸೇರಿ ಕಳ್ಳತನದ ನಾಟಕವಾಡಿದ್ದಾರೆ.. ಇದೇ 23ರಂದು ಮನ್ಸಲಾಪುರ ಹೂವಿನ ಅಂಜನೇಯ ದೇವಸ್ಥಾನಕ್ಕೆ ಇಬ್ಬರೂ ಹೋಗಿದ್ದರು.. ಈ ವೇಳೆ ಬಹಿರ್ದೆಸೆಗೆ ತೆರಳಿದ್ದಾಗ ವ್ಯಕ್ತಿಯೊಬ್ಬ ಚಾಕು ತೋರಿಸಿ ಆಭರಣಗಳನ್ನು ಕಿತ್ತುಕೊಂಡು ಹೋಗಿದ್ದಾನೆ ಎಂದು ಕತೆ ಕಟ್ಟಲಾಗಿತ್ತು.. ಈ ಸಂಬಂಧ ರಾಯಚೂರು ಗ್ರಾಮೀಣ ಠಾಣೆಗೆ ತೆರಳಿ ರಾಜೇಶ್ವರಿ ಕೇಸು ದಾಖಲು ಮಾಡಿದ್ದರು..
ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಈ ಮಹಿಳೆರ ಮೇಲೆಯೇ ಅನುಮಾನ ಬಂದಿದೆ.. ಅವರನ್ನು ಕರೆಸಿ ತೀವ್ರ ವಿಚಾರಣೆ ನಡೆಸಿದಾಗ ನಿಜ ವಿಷಯ ಬಾಯ್ಬಿಟ್ಟಿದ್ದಾರೆ..