Districts

ಮತ್ತೆ ಗಡಿ ಸಾಮರಸ್ಯ ಕದಡಿದ ಎಂಇಎಸ್‌ ಮುಖಂಡ; ವಿವಾದಿತ ಟ್ವೀಟ್‌

ಬೆಳಗಾವಿ: ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಸೇರಿದಂತೆ ಮರಾಠಿ ಭಾಷಿಕರ ಪ್ರದೇಶಗಳನ್ನು ಸೇರಿಸಿ ಸಂಯುಕ್ತ ಮಹಾರಾಷ್ಟ್ರ ರಚನೆಯಾಗಬೇಕು. ಗಡಿಯಲ್ಲಿರುವ ಮರಾಠಿ ಭಾಷಿಗರಿಗೆ ನ್ಯಾಯ ಸಿಗಬೇಕು ಎಂದು ಬೆಳಗಾವಿಯ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಯುವ ಘಟಕದ ಅಧ್ಯಕ್ಷ ಶುಭಂ ಶೆಳಕೆ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಟ್ವೀಟ್‌ನಿಂದಾಗಿ ಗಡಿ ವಿಚಾರ ಮತ್ತೆ ವಿವಾದಕ್ಕೆ ಕಾರಣವಾಗಿದೆ.

ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ‌ ಗ್ರಾಫಿಕ್ ವಿಡಿಯೊ ಕೂಡಾ ಪೋಸ್ಟ್‌ ಮಾಡಲಾಗಿದೆ. ಕಟ್ಟಾ ಮಹಾರಾಷ್ಟ್ರವಾದಿಗಳಾಗಿರುವ ನಾವು ಮಹಾರಾಷ್ಟ್ರ ದಿನದಂದು ಮುಕ್ತವಾಗಿ ಶುಭಾಶಯ ಹೇಳುವ ಸ್ಥಿತಿಯಲ್ಲಿಲ್ಲ. ಸಂಯುಕ್ತ ಮಹಾರಾಷ್ಟ್ರಕ್ಕಾಗಿ ನಡೆದ ಚಳವಳಿಯಲ್ಲಿ ರಕ್ತ ನೆಲಕ್ಕೆ ಬಿದ್ದು 66 ವರ್ಷಗಳಾಗಿವೆ. ಬೆಳಗಾವಿಯ ಗಡಿಯಲ್ಲಿರುವ ನಿವಾಸಿಗಳು ಇಂದಿಗೂ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದ್ದು, ಮತ್ತೆ ಗಡಿಯಲ್ಲಿ ಸಾಮರಸ್ಯ ಕದಡುವ ಪ್ರಯತ್ನ ಮಾಡಿದ್ದಾರೆ.

Share Post