CrimeDistricts

ನಾಲೆಗೆ ಉರುಳಿದ ಕಾರು; ಇಬ್ಬರ ದಾರುಣ ಸಾವು

ರಾಯಚೂರು; ರಾಯಚೂರು ಜಿಲ್ಲೆ ಮಸ್ಕಿ ಸಮೀಪ ದುರಂತವೊಂದು ನಡೆದಿದೆ. ಕಾರೊಂದು ಮಸ್ಕಿ ನಾಲೆಗೆ ಉರುಳಿಬಿದ್ದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷನ ಮೃತದೇಹ ಪತ್ತೆಯಾಗಿದೆ. ಇನ್ನೂ ಯಾರಾದರೂ ಕಾರಿನಲ್ಲಿ ಇದ್ದರಾ ಎಂಬುದರ ಬಗ್ಗೆ ಹುಡುಕಾಟ ನಡೆಸಲಾಗುತ್ತಿದೆ.

ಕಾರು ಆಂಧ್ರ ಮೂಲದ್ದು ಎಂದು ತಿಳಿದುಬಂದಿದೆ. ಭಾರಿ ಮಳೆಯಿಂದಾಗಿ ಕಾರು ನಿಯಂತ್ರಣ ತಪ್ಪಿ ನಾಳೆಗೆ ಉರುಳಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಮಸ್ಕಿ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Share Post