Districts

32 ವರ್ಷಗಳ ಬಳಿಕ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ

ಚಿತ್ರದುರ್ಗ; 32 ವರ್ಷಗಳ ಬಳಿಕ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಈ ಗ್ರಾಮದಲ್ಲಿ ಅನೇಕ ಕಟ್ಟುಪಾಡುಗಳಿದೆ. ಈ ದೇವಿಯ ಜಾತ್ರೆಯ ಸಮಯದಲ್ಲಿ ಗ್ರಾಮದೊಳಗೆ ಚಪ್ಪಲಿ ನಿಷಿದ್ದ. ಯಾರು ಸಹ ಚಪ್ಪಲಿಯನ್ನ ಧರಿಸುವಂತಿಲ್ಲ , ಗ್ರಾಮಸ್ಥರು, ಹೊರಗಿನವರು ಎಲ್ಲರೂ ಕಡ್ಡಾಯವಾಗಿ ನಿಯಮ ಪಾಲಿಸಲೇ ಬೇಕು.
ಮೂರು ದಶಕಗಳ ಬಳಿಕ ಕೋಟೆನಾಡು ಚಿತ್ರದುರ್ಗ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿ 32 ವರ್ಷಗಳ ಬಳಿಕ ಗ್ರಾಮ ದೇವತೆಯರ ಉತ್ಸವ ನಡೆಯುತ್ತಿದೆ. ಇದಕ್ಕಾಗಿ ಇಡೀ ಊರು ಸಂಭ್ರಮದಿಂದ ಸಜ್ಜಾಗಿದೆ ಇಡೀ ಗ್ರಾಮವನ್ನ ಶುಭ್ರ ಮಾಡಿ ಗ್ರಾಮದ ಸುತ್ತಾ ಗಂಜಲ ಹಾಕಿ ಶುದ್ದಗೊಳಿಸಲಾಗಿದೆ.
ಗ್ರಾಮದ ದೇವತೆಗಳಾದ ದುರ್ಗಾಂಬಾ, ಮಾರಿಕಾಂಬಾ ಹಾಗೂ ಬಸಾಯ ಪಟ್ಟಣಂ ದೇವಿಯರ ಉತ್ಸವವನ್ನ ಗ್ರಾಮಸ್ಥರು ಆಯೋಜಿಸಿದ್ದಾರೆ. ಮೊದಲ ದಿನ ಗಂಗಾಪೂಜೆ, ಉತ್ಸವ ಮೂರ್ತಿಗಳ ಮೆರವಣಿಗೆ, ವಿಶೇಷ ಪೂಜಾ ಆಚರಣೆ ನಡೆದಿದೆ.
ಇನ್ನು ಈ ಉತ್ಸವದ ವಿಶೇಷ ಅಂದ್ರೆ ಸರಗಾ. ಅಂದ್ರೆ ಇಡೀ ಗ್ರಾಮದ ಸೀಮೆಗೆ ವಿಶೇಷ ಗಂಗಾಜಲ ಚಿಮುಕಿಸಿ ಸರಗಾ ಹಾಕಲಾಗುತ್ತದೆ. ಗ್ರಾಮಕ್ಕೆ ಗ್ರಾಮವನ್ನೇ ಶುದ್ಧಗೊಳಿಸಿ ಒಂದೇ ಮನೆಯಂತೆ ಭಾವಿಸಲಾಗುತ್ತೆ. ಇದೇ ಕಾರಣಕ್ಕೆ ಇಲ್ಲಿ ಯಾರು ಕೂಡಾ ಚಪ್ಪಲಿ ಧರಿಸುವಂತಿಲ್ಲ.
ಗ್ರಾಮದಲ್ಲಿ ಓಡಾಡುವವರು ಮಾತ್ರವಲ್ಲ ಈ ಗ್ರಾಮದ ರಸ್ತೆಯಲ್ಲಿ ಹಾದು ಹೋಗುವವರು ಸಹ ಪಾದರಕ್ಷೆ ಧರಿಸುವಂತಿಲ್ಲ. ಬೈಕ್ ಮತ್ತು ಕಾರಿನಲ್ಲಿ ಸಂಚರಿಸುವವರು ಕೂಡಾ ಪಾದರಕ್ಷೆ ತೆಗೆದು ಬ್ಯಾಗ್ಗಳಲ್ಲಿಟ್ಟುಕೊಂಡು ಹೋಗುವಂತೆ ಸೂಚಿಸಲಾಗುತ್ತದೆ. ಅದಕ್ಕೆಂದೆ ಗ್ರಾಮದ ಕೆಲ ಯುವಕರು ನಿಗಾವಹಿಸುತ್ತಾರೆ.
ಆದುನಿಕ ಯುಗದಲ್ಲಿ ಇಂತಹ ವಿಶಿಷ್ಟ ಆಚರಣೆಗಳನ್ನ ಕೋಟೆನಾಡಿನ ಜನರು ಶ್ರದ್ಧೆಯಿಂದ ಆಚರಿಸುತ್ತಾ ಬಂದಿದ್ದಾರೆ ಅದಕ್ಕೆ ಸಾಕ್ಷಿಯೇ ಈ ಉತ್ಸವ.

Share Post