CrimeDistricts

ಮೂವರು ಹಾಸ್ಟೆಲ್‌ ವಿದ್ಯಾರ್ಥಿನಿಯರು ನಾಪತ್ತೆ

ಮಂಗಳೂರು; ಮಂಗಳೂರು ನಗರದ ಕಾಲೇಜೊಂದರ ವಿದ್ಯಾರ್ಥಿನಿಲಯದಿಂದ ಮೂವರು ವಿದ್ಯಾರ್ಥಿನಿಯರು ಇಂದು ನಾಪತ್ತೆಯಾಗಿದ್ದಾರೆ. ಮೂವರು ವಿದ್ಯಾರ್ಥಿನಿಯರು ಬ್ಯಾಗ್‌ಗಳೊಂದಿಗೆ ಹಾಸ್ಟೆಲ್‌ನಿಂದ ಮುಂಜಾನೆಯೇ ಹೊರಹೋಗಿದ್ದಾರೆ. ಸಿಸಿಟಿವಿಯಲ್ಲೂ ಆ ದೃಶ್ಯಗಳು ಸೆರೆಯಾಗಿವೆ. ಆದ್ರೆ ಹಾಸ್ಟೆಲ್‌ನಿಂದ ಹೊರಹೋದ ವಿದ್ಯಾರ್ಥಿನಿಯರು ವಾಪಸ್‌ ಬಂದಿಲ್ಲ.

ವಿದ್ಯಾರ್ಥಿನಿಯರು ಎಲ್ಲಿಗೆ ಹೋಗಿದ್ದಾರೆ‌ ಎಂದು ತಿಳಿದಿಲ್ಲ. ಅವರ ಮನೆಯವರನ್ನು ಸಂಪರ್ಕಿಸಿ ಹೆಚ್ಚಿನ‌ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ಹಾಸ್ಟೆಲ್‌ನವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿನಿಯರ ಸ್ನೇಹಿತೆಯರಿಂದ ಮಾಹಿತಿ ಕಲೆಹಾಕಲಾಗುತ್ತಿದೆ.

Share Post