Districts

ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ; ಗಣ್ಯರ ಕಂಬನಿ

ವಿಜಯಪುರ: ನಡೆದಾಡು ದೇವರೆಂದೆ ಪ್ರಸಿದ್ದರಾದ ವಿಜಯಪುರದ ಜ್ಞಾನಯೋಗಾಶ್ರಮ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ತಿಳಿಸಿದ್ದಾರೆ.

ವಯೋಸಹಜ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿದ್ದಾರೆ. ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಂಜೆ 6 ಗಂಟೆ‌ 5 ನಿಮಿಷಕ್ಕೆ ಶ್ರೀಗಳು ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ವಿಧಿವಶರಾದರು.ನಾಳೆ ಸಂಜೆ 5 ಗಂಟೆಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರೆವೆರಿಸಲಾಗುತ್ತದೆ.

ಶ್ರೀಗಳ ಅಂತಿಮ ದರ್ಶನಕ್ಕೆ ಈಗಾಗಲೇ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ 4 ಗಂಟೆ ವರೆಗೆ ಆಶ್ರಮದ ಆವರಣದಲ್ಲಿ ದರ್ಶನಕ್ಕೆ ವ್ಯವಸ್ಥೆ ಬಳಿಕ ಸೈನಿಕ ಶಾಲೆ ಆವರಣದಲ್ಲಿ ಸಂಜೆ 4 ಗಂಟೆವರೆಗೆ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ 5 ಗಂಟೆಗೆ ಆಶ್ರಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಸರಳ ವ್ಯಕ್ತಿತ್ವದ ಸಿದ್ದೇಶ್ವರ ಸ್ವಾಮಿಯವರು ತಮ್ಮ ಅಂತ್ಯ ಕ್ರಿಯೆ ಅತಿ ಸರಳ ರೀತಿಯಲ್ಲಿ ನಡೆಸುವಂತೆ ಮೊದಲೇ ತಮ್ಮ ಶಿಷ್ಯರಿಗೆ ತಿಳಿಸಿದ್ದರು. ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ಮೂರ್ತಿ ಪ್ರತಿಷ್ಠಾಪನೆ ಮಾಡದಂತೆ ಹೇಳಿದ್ದರು ಎಂದು ಹೇಳಲಾಗಿದೆ. ದೇಹವನ್ನು ಅಗ್ನಿಸ್ಪರ್ಶ ಮಾಡಿ ಎಂದು ತಿಳಿಸಿದ್ದರು. ಹಾಗೂ ಯಾವುದೇ ಮಂದಿರ , ಸ್ಮಾರಕ ನಿರ್ಮಿಸಬಾರದು ಎಂದು ಸಹ 2014 ರಲ್ಲೇ ವಿಲ್ ಬರೆದಿದ್ದರು. ಅವರ ಇಚ್ಚೆಯಂತೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಪಾರ ಜ್ಞಾನಿ, ಸರಳತೆಯ ಸಾಕಾರಮೂರ್ತಿ, ಮಹಾಪುರುಷ 82ರ ಇಳಿ ವಯಸ್ಸಿನ ಸಿದ್ದೇಶ್ವರ ಸ್ವಾಮಿಯವರು ಪ್ರವಚನ, ಬೋದನೆ, ಮಾಡುವ ಮೂಲಕ ದೈವ ಮಾನವ ಎಂದು ರಾಜ್ಯಾದ್ಯಂತ ಕೀರ್ತಿ ಪಡೆದಿದ್ದರು. ಅಂತಿಮ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಅವರ ಅಪಾರ ಭಕ್ತ ವೃಂದ ಮಠದತ್ತ ದಾವಿಸುತ್ತಿದ್ದಾರೆ.ಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ನ್ನ ಕೈಗೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ.

Share Post