Districts

ರಸ್ತೆ ಬದಿ ಮೀನು ಮಾರಾಟಕ್ಕೆ ಬ್ರೇಕ್‌; ಪ್ರತಿಭಟನೆ

ಹಾಸನ; ರಸ್ತೆ ಬದಿ ಮೀನು ಮಾರಾಟ ಮಾಡಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಮೀನು ಮಾರಾಟಗಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೀನು ಸುರಿದು ವಿನೂತನವಾಗಿ ಪ್ರತಿಭಟನೆ ನಡೆಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಳ್ಳ ಕೊಳ್ಳಗಳಲ್ಲಿ ಮೀನು ಹಿಡಿದು ರಸ್ತೆ ಬದಿ ಮಾರಾಟ ಮಾಡುತ್ತಿದ್ದ ಮೀನುಗಾರರು ಇನ್ಮುಂದೆ ನಗರದ ಯಾವುದೇ ರಸ್ತೆ ಬದಿಯಲ್ಲಿ ಮೀನು ಮಾರಬಾರದು ಎಂದು ನಗರಸಭೆ ಅಧಿಕಾರಿಗಳ ತಾಕೀತು ಮಾಡಿರುವುದು ಖಂಡನೀಯ. ಕಷ್ಟಾಪಟ್ಟು ಮೀನು ಹಿಡಿದು ವ್ಯಾಪಾರ ಮಾಡುತ್ತೇವೆ, ಮೀನು ಮಾರಾಟದಿಂದಲೇ ನಮ್ಮ ದಿನನಿತ್ಯದ ಜೀವನ ಸಾಗುತ್ತಿದೆ.

ನಮ್ಮಿಂದ ನಗರದಲ್ಲಿ ಯಾವುದೇ ತೊಂದರೆ ಆಗಿಲ್ಲ. ಆದರೂ ನಮಗೆ ಮಾರಾಟಕ್ಕೆ ಅವಕಾಶ ನೀಡದೇ ಇರೋದು ಖಂಡನೀಯ, ಈ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

Share Post