ಉಡುಪಿ ದೇವಸ್ಥಾನ ಬ್ಲಾಸ್ಟ್ಗೂ ಸಂಚು ರೂಪಿಸಿದ್ದರಂತೆ ಉಗ್ರರು..!
ಶಿವಮೊಗ್ಗ; ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿದ್ದ ಘಟನೆ ಈ ಹಿಂದೆ ನಡೆದಿತ್ತು. ಕದ್ರಿ ದೇವಸ್ಥಾನದಲ್ಲಿ ಸ್ಫೋಟ ನಡೆಸುವುದಕ್ಕಾಗಿ ಈ ಸ್ಫೋಟಕ ತೆಗೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆಯೇ ಈ ಅವಘಡ ಸಂಭವಿಸಿತ್ತು. ಒಂದು ವೇಳೆ ಅಂದಿನ ಪ್ಲ್ಯಾನ್ ಸಕ್ಸಸ್ ಆಗಿದ್ದರೆ ಮತ್ತಷ್ಟು ಸ್ಫೋಟಗಳನ್ನು ನಡೆಸಲು ಉಗ್ರರು ಪ್ಲ್ಯಾನ್ ಮಾಡಿದ್ದರಂತೆ. ಪ್ರಕರಣದ ತನಿಖೆ ನಡಸುತ್ತಿರುವ ಎನ್ಐಎ ಈ ಆಘಾತಕಾರಿ ವಿಚಾರವನ್ನು ಬಯಲಿಗೆಳೆದಿದೆ.
ಬಂಧಿತ ಅರಾಫತ್ ಅಲಿ, ತೀರ್ಥಹಳ್ಳಿ ಬ್ರದರ್ಸ್ ಟಾರ್ಗೆಟ್ ಹಾಕಿಕೊಂಡ ಕರ್ನಾಟಕದಲ್ಲಿ ಮೂರು ಸ್ಥಳಗಳ ಬಗ್ಗೆ ಎನ್ ಐ ಎ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಕದ್ರಿ ದೇವಸ್ಥಾನ ಬ್ಲಾಸ್ಟ್ ಯೋಜನೆ ಸಕ್ಸಸ್ ಆಗಿದ್ದಿದ್ದರೆ, ನೆಕ್ಸ್ಟ್ ಟಾರ್ಗೆಟ್ ಉಡುಪಿ ಮಠ ಆಗಿತ್ತು ಅನ್ನೋದು ತನಿಖೆ ವೇಳೆ ಗೊತ್ತಾಗಿದೆ. ಅದಾದ ಮೇಲೆ ಚಿಕ್ಕಮಗಳೂರಿನ ಬಿಜೆಪಿ ಕಚೇರಿಯ ಸ್ಫೋಟಕ್ಕೂ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ಐಸಿಸ್ ಮಾಡೆಲ್ ಕೇಸ್ ವಿಚಾರವಾಗಿ ಕಳೆದ ಮೂರು ದಿನದಿಂದ ಎನ್ಐಎ ತಂಡ ಮಲೆನಾಡಲ್ಲಿ ಬೀಡು ಬಿಟ್ಟಿದೆ. ತೀರ್ಥಹಳ್ಳಿಯ ನಾಲ್ವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ.