BengaluruCrime

ಕೆರೆಯಲ್ಲಿ ತೇಲಿಬಂತು ಮಹಿಳೆಯ ಶವವಿದ್ದ ಸೂಟ್‌ಕೇಸ್‌

ನೆಲಮಂಗಲ; ಮಹಿಳೆಯೊಬ್ಬರ ಶವವಿದ್ದ ಸೂಟ್‌ಕೇಸ್‌ ಕೆರೆಯಲ್ಲಿ ತೇಲಿಬಂದಿದೆ. ನೆಲಮಂಗಲ ತಾಲ್ಲೂಕಿನ ಹೊನ್ನೇನಹಳ್ಳಿ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ಕೆರೆಯಲ್ಲಿ ಸೂಟ್‌ಕೇಸ್‌ ತೇಲುತ್ತಿರುವುದರನ್ನು ಕಂಡು ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸೂಟ್‍ಕೇಸ್ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಸೂಟ್‍ಕೇಸ್‍ನಲ್ಲಿ ಅಪರಿಚಿತ ಮಹಿಳೆ ಮೃತ ದೇಹ ಪತ್ತೆಯಾಗಿದೆ.

ಸುಮಾರು 23 ರಿಂದ 30 ವರ್ಷ ವಯಸ್ಸಿನ ಮಹಿಳೆಯ ಶವ ಇದಾಗಿರಬಹುದೆಂದು ಅಂದಾಜಿಸಲಾಗಿದೆ. ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿಟ್ಟು, ತಂದು ಕೆರೆಗೆ ಎಸೆಯಲಾಗಿದೆ. ಮಹಿಳೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

 

 

Share Post