ಬರೀ ಗುರಾಯಿಸಿದ್ದಕ್ಕೆ ಬಿತ್ತು ಹೆಣ; ಮೈಸೂರಿನಲ್ಲಿ ಇದೆಂಥಾ ದಾರುಣ..?
ಮೈಸೂರು; ಕ್ಷುಲ್ಲಕ ಕಾರಣಕ್ಕೆಲ್ಲಾ ಕೊಲೆಗಳಾಗುತ್ತಿವೆ.. ಮೈಸೂರನಲ್ಲಿ ಬರೀ ಗುರಾಯಿಸಿದ ಅನ್ನೋ ಕಾರಣಕ್ಕೆ ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಮೈಸೂರು ನಗರ ಬೆಚ್ಚಿಬಿದ್ದಿದೆ.. ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ಈ ದುರ್ಘಟನೆ ನಡೆದಿದೆ..
18 ವರ್ಷದ ಅರ್ಬಾಜ್ ಖಾನ್ ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.. ಶಾಂತಿನಗರದ ಲಾಲ್ ಮಸೀದಿ ಬಳಿ ಗುರಾಯಿಸಿದ ಎಂಬ ಕಾರಣಕ್ಕೆ ಯುವಕರ ನಡುವೆ ತೀವ್ರ ಜಗಳವಾಗಿದೆ.. ಇದೇ ಸಂದರ್ಭದಲ್ಲಿ ನಾಲ್ವರು ಯುವಕರು ಮಚ್ಚುಗಳನ್ನು ತಂದು ಅರ್ಬಾಜ್ ಖಾನ್ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ..
ಇನ್ನು ಘಟನೆಯಲ್ಲಿ ಪ್ರಮುಖ ಆರೋಪಿ ಶಹಬಾಜ್ಗೂ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.. ಉದಗಿರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ..