CrimeNationalPolitics

ಫುಟ್‌ಪಾತ್‌ ಮೇಲೆ ಮಲಗಿದ್ದಾತನ ಮೇಲೆ ಕಾರು ಹತ್ತಿಸಿದ ಸಂಸದನ ಮಗಳು!

ಬೆಂಗಳೂರು; ಫುಟ್‌ಪಾತ್‌ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ರಾಜ್ಯಸಭಾ ಸದಸ್ಯರೊಬ್ಬರ ಮಗಳು ಕಾರು ಹತ್ತಿಸಿದ್ದು, ಆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ತಮಿಳುನಾಡಿನ ಚೆನ್ನೈನಲ್ಲಿ ಈ ದುರ್ಘಟನೆ ನಡೆದಿದೆ.. ಅಪಘಾತದ ನಂತರ ರಾಜಕಾರಣಿಯ ಮಗಳು ಕಾರಿನೊಂದಿಗೆ ಅಲ್ಲಿಂದ ಎಸ್ಕೇಪ್‌ ಆಗಿದ್ದಾಳೆ ಎಂದು ತಿಳಿದುಬಂದಿದೆ..

ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಪಕ್ಷದ ರಾಜ್ಯಸಭಾ ಸದಸ್ಯ ಬೀಡಾ ಮಸ್ತಾನ್‌ ರಾವ್‌ ಅವರ ಮಗಳ ಹೆಸರು ಕೇಳಿಬರುತ್ತಿದೆ.. ಕಾರು ಹತ್ತಿಸಿದ್ದರಿಂದ 21 ವರ್ಷದ ಸೂರ್ಯ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದ.. ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.. ಇನ್ನು ನಿನ್ನೆ ಆರೋಪಿ ಹಾಗೂ ರಾಜ್ಯಸಭಾ ಸದಸ್ಯರ ಪುತ್ರಿ ಮಾಧುರಿಯನ್ನು ಪೊಲೀಸರು ಬಂಧಿಸಿದ್ದಾರೆ.. ಆದ್ರೆ ತಕ್ಷಣವೇ ಜಾಮೀನಿನ ಮೇಲೆ ಆಕೆ ಹೊರಬಂದಿದ್ದಾಳೆ ಎಂದು ತಿಳಿದುಬಂದಿದೆ..

ಬಿಎಂಡಬ್ಲ್ಯೂ ಕಾರಿನಲ್ಲಿ ಬಂದಿದ್ದ ಮಾಧುರಿ ಕಾರನ್ನು ಫುಟ್‌ಪಾತ್‌ ಮೇಲೆ ಹತ್ತಿಸಿದ್ದಾಳೆ.. ಈ ವೇಳೆ ಅಲ್ಲಿ ಮಲಗಿದ್ದ ಯುವಕನ ಮೇಲೆ ಕಾರು ಹರಿದಿದ್ದು, ಆ ಯುವಕ ಸಾವನ್ನಪ್ಪಿದ್ದಾನೆ.. ಘಟನೆ ನಡೆಯುತ್ತಿದ್ದಂತೆ ಮಾಧುರಿ ಸ್ಥಳದಿಂದ ಕಾಲ್ಕಿತ್ತಿದ್ದಳು.. ಮೃತ ಯುವಕ ಸೂರ್ಯ 8 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂದು ತಿಳಿದುಬಂದಿದೆ.

 

Share Post