ಪತ್ನಿಯ ರುಂಡದೊಂದಿಗೆ ಊರಿಂದ ಊರಿಗೆ ಅಲೆದಾಡಿದ ಕೊಲೆಗಡುಕ ಪತಿ!
ಬಿಹಾರ; ಪತ್ನಿಯ ರುಂಡ ಕಡಿದ ಪಾಪಿ ಪತಿ, ಆ ತಲೆಯನ್ನು ಕೈಲಿ ಹಿಡಿದುಕೊಂಡು ಊರೂರು ಸುತ್ತಿ ವಿಕೃತಿ ಪ್ರದರ್ಶನ ಮಾಡಿದ್ದಾರೆ.. ಬಿಹಾರದ ಮಾಧೇಪುರದ ಶ್ರೀನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.. ಇಲ್ಲಿ ಪೊಖಾರಿಯಾದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯ ರುಂಡ ಕಡಿದಿದ್ದಾನೆ.. ಅನಂತರ ಆ ತಲೆಯನ್ನು ಕೈಲಿ ಹಿಡಿದುಕೊಂಡು ಊರೂರು ಸುತ್ತಿದ್ದಾನೆ..
ಪತ್ನಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಪಾಪಿ ಪತಿ ಈ ಕೆಲಸ ಮಾಡಿದ್ದಾರೆ.. ಪೂಜಾ ದೇವಿ ಎಂಬಾಕೆಯೇ ಕೊಲೆಯಾದ ದುರ್ದೈವಿಯಾಗಿದ್ದಾಳೆ.. ಈಕೆಯ ಕತ್ತು ಸೀಳಿ ಕೊಲೆ ಮಾಡಿರುವ ಪತಿ ಅರ್ಜುನ್ ಶರ್ಮಾ, ರುಂಡವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಹಲವಾರು ಕಡೆ ಸುತ್ತಾಟ ನಡೆಸಿದ್ದಾನೆ.. ಆತನ ಹಿಡಿದಿದ್ದ ಚೀಲದಿಂದ ರಕ್ತ ಸೋರುತ್ತಿತ್ತು.. ಇದನ್ನು ನೋಡಿದ ಜನರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.. ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಬ್ಯಾಗ್ ಪರಿಶೀಲನೆ ಮಾಡಿದಾಗ ಆತನ ಪತ್ನಿಯ ರುಂಡ ಅದರಲ್ಲಿರೋದು ಪತ್ತೆಯಾಗಿದೆ.
ಈ ಬಗ್ಗೆ ಡಿಎಸ್‌ಪಿ ಮನೋಜ್ ಮೋಹನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ. ಜನರು ಏಕೆ ಪತ್ನಿಯನ್ನು ಕೊಂದಿದ್ದೀಯ ಎಂದು ಪ್ರಶ್ನೆ ಮಾಡಿದ್ದಕ್ಕೆ ಆಕೆಗೆ ಬೇರೊಬ್ಬನ ಜೊತೆ ಸಂಬಂಧ ಇತ್ತು ಎಂದು ಹೇಳಿದ್ದ ಎನ್ನಲಾಗಿದೆ..