CrimeDistricts

ಚಲಿಸುತ್ತಿದ್ದ ರೈಲಿನ ಎದುರೇ ಕುಸಿದ ಗುಡ್ಡ!; ಹಳಿ ತಪ್ಪಿದ ರೈಲು!

ಹಾಸನ; ರೈಲು ಬರುತ್ತಿರುವಾಗಲೇ ಗುಡ್ಡ ಕುಸಿದು ಹಾಸನದ ಬಳಿ ಅವಾಂತರ ನಡೆದಿದೆ.. ಗುಡ್ಡ ಕುಸಿದಿದ್ದರಿಂದ ಶಾಂತಿ ಗ್ರಾಮದ ಬಳಿ ಗೂಡ್ಸ್‌ ರೈಲೊಂದು ಹಳಿ ತಪ್ಪಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೆಳಗಿನ ಜಾವ 5.45ರ ಸುಮಾರಿಗೆ ಈ ದುರ್ಘಟನೆ ನಡೆದಿದೆ..

ಇದನ್ನೂ ಓದಿ; 633 ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸಾವು..!

ಹಲವು ದಿನಗಳಿಂದ ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.. ಮೊನ್ನೆ ಕೂಡಾ ಹಾಸನದ ಕೆಲವು ಸ್ಥಳಗಳಲ್ಲಿ ಗುಡ್ಡ ಕುಸಿದಿದ್ದವು.. ಇದೀಗ ರೈಲ್ವೇ ಟ್ರ್ಯಾಕ್‌ ಮೇಲೆ ಗುಡ್ಡ ಕುಸಿದಿದೆ.. ಇದರಿಂದಾಗಿ ಅದೇ ವೇಳೆ ಬರುತ್ತಿದ್ದ ಗೂಡ್ಸ್‌ ರೈಲು ಪಕ್ಕಕ್ಕೆ ಸರಿದಿದೆ.. ಗೂಡ್ಸ್‌ ರೈಲಾಗಿದ್ದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದುರದೃಷ್ಟವಶಾತ್‌ ಪ್ಯಾಸೆಂಜರ್‌ ರೈಲು ಬಂದಿದ್ದರು ಅನಾಹುತ ನಡೆಯುವ ಸಾಧ್ಯತೆ ಇತ್ತು.

ಇದನ್ನೂ ಓದಿ; ಸ್ಕೂಟಿಯಲ್ಲಿ ಹೋಗುವಾಗ ಕೇಳಿಸಿತು ಬುಸ್‌ ಬುಸ್‌ ಶಬ್ದ!; ಡಿಕ್ಕಿಯಲ್ಲಿತ್ತು ಹಾವಿನ ಮೊಟ್ಟೆಗಳು!

ರೈಲು ಹಳಿ ಮೇಲೆ ಮಣ್ಣು ಬಿದ್ದಿದೆ.. ಇದನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ.. ಮಣ್ಣು ತೆರವುಗೊಳಿಸಿ ಗೂಡ್ಸ್‌ ರೈಲು ಹಳಿಗೆ ತಂದ ಮೇಲಷ್ಟೇ ಈ ಭಾಗದಲ್ಲಿ ರೈಲು ಓಡಾಡಲು ಸಾಧ್ಯ.. ಅಲ್ಲಿಯವರೆಗೆ ಈ ಮಾರ್ಗದಲ್ಲಿ ಓಡಾಡುವ ರೈಲುಗಳು ಸಂಚಾರದಲ್ಲಿ ವ್ಯತ್ಯಯವಾಗಲಿದೆ..

Share Post