BengaluruCrime

ಕುಸಿದ ರಸ್ತೆ; ಎಂಜಿ ರಸ್ತೆ ಬಳಿ ರಸ್ತೆ ಮಧ್ಯೆ ದೊಡ್ಡ ಗುಂಡಿ

ಬೆಂಗಳೂರು; ಎರಡು ದಿನದ ಹಿಂದಷ್ಟೇ ಮೆಟ್ರೋ ಪಿಲ್ಲರ್‌ ಉರುಳಿ ತಾಯಿ ಹಾಗೂ ಮಗು ಸಾವನ್ನಪ್ಪಿತ್ತು. ಈ ಪ್ರಕರಣದ ಬೆನ್ನಲ್ಲೇ ಮತ್ತೊಂದು ದುರ್ಘಟನೆ ನಡೆದಿದೆ. ಎಂಜಿ ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಯನ್ನು ಸಂಪರ್ಕಿಸುವ ರಸ್ತೆ ಕೆಳಗೆ ಬಿಎಂಆರ್‌ಸಿಎಲ್‌ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ವೇಳೆ ರಸ್ತೆ ಕುಸಿದ್ದು, ರಸ್ತೆ ಮಧ್ಯೆ ದೊಡ್ಡ ಗುಂಡಿ ಬಿದ್ದಿದೆ.

ಗುಂಡಿ ಬಿದ್ದಿರುವ ಹಿನ್ನೆಲೆಯಲ್ಲಿ ಗುಂಡಿ ಬಿದ್ದ ಭಾಗವನ್ನು ಮುಚ್ಚಲಾಗಿದೆ. ವಾಹನಗಳನ್ನು ಸಂಚಾರವನ್ನು ಪಕ್ಕಕ್ಕೆ ತಿರುಗಿಸಲಾಗಿದೆ. ರಸ್ತೆ ಕುಸಿಯುತ್ತಿದ್ದಂತೆ ಇಬ್ಬರು ಬೈಕ್‌ ಸವಾರರು ಅದರಲ್ಲಿ ಬಿದ್ದಿದ್ದಾರೆ. ಆದ್ರೆ ಅದೃಷ್ಟವಶಾತ್‌ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ.

Share Post