CrimeDistricts

ಸ್ಪೋರ್ಟ್ಸ್‌ ಹೇಳಿಕೊಡೋ ನೆಪ; ಮಂಡ್ಯದಲ್ಲಿ ಹಲವು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ!

ಮಂಡ್ಯ; ಆಟ ಹೇಳಿಕೊಡುತ್ತೇನೆಂದು ಬಂದ ವ್ಯಕ್ತಿಯೊಬ್ಬ ಒಂದೇ ಶಾಲೆಯ ಹಲವಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ  ನಡೆಸಿರುವ ಆರೋಪ ಕೇಳಿಬಂದಿದೆ.. ಮಂಡ್ಯ ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ಹಳೆಯ ವಿದ್ಯಾರ್ಥಿ ಯೋಗಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ..

ಆರೋಪಿ ಸ್ಫೋರ್ಟ್ಸ್‌ ಮತ್ತು ಡ್ರಾಯಿಂಗ್‌ ಹೇಳಿಕೊಡುತ್ತೇನೆ ಎಂದು ಬಂದು ವಿದ್ಯಾರ್ಥಿನಿಯರನ್ನು ನಂಬಿಸಿದ್ದಾನೆ.. ಅನಂತರ ಅವರನ್ನು ಪುಸಲಾಯಿಸಿ ನಗ್ನ ಫೋಟೋಗಳನ್ನು ತೆಗೆದಿದ್ದಾನೆ.. ಅವುಗಳನ್ನು ನಿಮ್ಮ ತಂದೆ-ತಾಯಿಗೆ ತೋರಿಸುತ್ತೇನೆ ಎಂದು ಬೆದರಿಸಿ, ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ..

ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡು ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.. ವಿದ್ಯಾರ್ಥಿನಿಯರ ಬಟ್ಟೆ ಬದಲಿಸುವಾಗ ನಗ್ನ ಫೋಟೋಗಳನ್ನು ಚಿತ್ರಿಸಿಕೊಂಡಿದ್ದ ಎಂದು ತಿಳಿದುಬಂದಿದೆ.. ನಾಲ್ವರು ವಿದ್ಯಾರ್ಥಿನಿಯರು ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ದೂರು ನೀಡಿದ್ದರು.. ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಆರೋಪಿಯ ಬಂಧನವಾಗುವಂತೆ ಮಾಡಿದ್ದಾರೆ..

 

Share Post