ಸೆಲ್ಫಿ ಮೋಜಿನಿಂದ ಕರೆಂಟ್ ಶಾಕ್‌ಗೆ ಗುರಿಯಾದ ಯುವಕ: ಜೀವನ್ಮರಣ ಹೋರಾಟ
ಗುಂಟೂರು: ಸೆಲ್ಫಿ ಹುಚ್ಚಿಗೆ ಪ್ರತಿದಿನ ಒಬ್ಬರಾದರೂ ಸಾವನ್ನಪ್ಪುವ ಸುದ್ದಿಗಳನ್ನು ಕೇಳುತ್ತೇವೆ. ಕಣ್ಣಾರೆ ನೋಡುತ್ತೇವೆ ಆದರೂ ಈ ಯುವಕ-ಯುವತಿಯರಿಗೆ ಸೆಲ್ಫಿ ಗೀಳು ಮಾತ್ರ ಕಡಿಮೆಯಾಗಲ್ಲ. ಇಂದು ಕೂಡ ಸೆಲ್ಫಿ ಕ್ರೇಜಿಗೆ ಗುಂಟೂರು ಜಿಲ್ಲೆಯ ಪಿಡುಗುರಳ್ಳ ರೈಲು ನಿಲ್ದಾಣದಲ್ಲಿ ಯುವಕ ಕರೆಂಟ್ ಶಾಕ್‌ಗೆ ಗುರಯಾಗಿರುವ ಘಟನೆ ನಡೆದಿದೆ. ಕಟಿಕಂ ವೀರಬ್ರಹ್ಮ ಎಂಬ ಯುವಕ ಪಿಡುಗುರಳ್ಳ ರೈಲು ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ತನ್ನ ಸೆಲ್ ಫೋನ್ ಇಟ್ಟು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾನೆ. ಈ ವೇಳೆ ರೈಲು ಮೇಲ್ಭಾಗದಲ್ಲಿ ಹಾಕಲಾಗಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ವೀರಬ್ರಹ್ಮನನ್ನು ರೈಲ್ವೆ ಪೊಲೀಸರು ಪಿಡುಗುರಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ವಿದ್ಯುತ್ ತಗುಲಿ ವೀರಬ್ರಹ್ಮನ ದೇಹ ಅರ್ಧಕ್ಕೂ ಹೆಚ್ಚು ಸುಟ್ಟು ಹೋಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.