CrimeNational

ಏಳು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆಸಿದ ಅನಕ್ಷರಸ್ತ!

ಭೋಪಾಲ್; ಆತ ಅನಕ್ಷರಸ್ತ.. ಆದ್ರೆ ಟೆಕ್ನಾಲಜಿ ಬಳಸಿಕೊಂಡು 7 ಕಾಲೇಜು ವಿದ್ಯಾರ್ಥಿನಿಯರಿಗೆ ಮಂಕು ಬೂದಿ ಎರಚಿ ಅತ್ಯಾಚಾರ ಎಸಗಿದ್ದಾನೆ.. ಧ್ವನಿ ಬದಲಿಸುವ ಮೊಬೈಲ್ ಆಪ್ ಬಳಸಿ ಈ ಕೃತ್ಯ ಎಸಗಿದ್ದಾನೆ. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ..

  ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಮಿಲ್​ ಕಾರ್ಮಿಕ ಬ್ರಜೇಶ್ ಕುಶ್ವಾಹಾ ಎಂಬಾತನೇ ಕಾಮುಕ ಕ್ರಿಮಿ.. ಈತ ಮಹಾರಾಷ್ಟ್ರದ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದ.. ಆಗ ಕೈಸುಟ್ಟುಕೊಂಡಿದ್ದ.. ನಂತರ ಮನೆಗೆ ವಾಪಸ್ಸಾಗಿದ್ದ.. ನಂತರ ಧ್ವನಿ ಬದಲಾಯಿಸುವ ಮೊಬೈಲ್​ ಆ್ಯಪ್​ ಬಳಸಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಮಹಿಳಾ ಪ್ರೊಫೆಸರ್​ನಂತೆ ಮಾತಾಡುತ್ತಿದ್ದ..

  ಸ್ಕಾಲರ್ಷಿಪ್ ಕೊಡಿಸುವುದಾಗಿ ಹೇಳಿ ಕರೆಸಿಕೊಂಡು ಆರೋಪಿ ಅತ್ಯಾಚಾರ ಎಸಗಿದ್ದ ಎಂದು ತಿಳಿದುಬಂದಿದೆ..

Share Post