CrimeNational

2ನೇ ದಿನವೂ ರಾಹುಲ್‌ ಪಾದಯಾತ್ರೆ; ಅರೆಸ್ಟ್‌ ಆಗ್ತಾರಾ ಕಾಂಗ್ರೆಸ್‌ ನಾಯಕ..?

ನವದೆಹಲಿ; ನಿನ್ನೆ ಹನ್ನೊಂದು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದ ರಾಹುಲ್‌ ಗಾಂಧಿ ಇಂದೂ ಕೂಡಾ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ನಿನ್ನೆಯಂತೆಯೇ ಇಂದೂ ಕೂಡಾ ಎಐಸಿಸಿ ಕಚೇರಿಯಿಂದ ಪಾದಯಾತ್ರೆ ಮೂಲಕ ಜಾರಿ ನಿರ್ದೇಶನಾಲಯದ ಕಚೇರಿಯತ್ತ ಹೊರಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಕಚೇರಿಯಿಂದ ಜಾರಿ ನಿರ್ದೇಶನಾಲಯದ ಕಚೇರಿವರೆಗೆ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

 

ಪಾದಯಾತ್ರೆಯಲ್ಲಿ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದಾರೆ. ನಿನ್ನೆ ತಡ ರಾತ್ರಿವರೆಗೂ ವಿಚಾರಣೆ ಎದುರಿಸಿದ್ದ ರಾಹುಲ್‌ ಗಾಂಧಿ, ಯಾವ ಪ್ರಶ್ನೆಗೂ ಸರಿಯಾಗಿ ಉತ್ತರ ನೀಡಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಇಂದು ದಾಖಲೆ ಸಮೀತ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸೂಚಿಸಿದ್ದಾರೆ.

 

ಇನ್ನು ರಾಹುಲ್‌ ಗಾಂಧಿಗೆ ಬಂಧನದ ಭೀತಿ ಎದುರಾಗಿದೆ. ಇಂದೇ ರಾಹುಲ್‌ ಗಾಂಧಿಯವರನ್ನು ಬಂಧಿಸಬಹುದಾ ಎಂಬ ಅನುಮಾನ ಕೂಡಾ ಮೂಡಿದೆ. ಈ ನಡುವೆ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ವಿಚಾರವಾಗಿ ರಾಹುಲ್‌ ಗಾಂಧಿ ವಿಚಾರಣೆ ನಡೆಸುತ್ತಿರುವುದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆಗಳನ್ನು ಮುಂದುವರೆಸಿದ್ದಾರೆ.

 

Share Post