CrimePolitics

ಮೇ 10ರೊಳಗೆ ಬೆಂಗಳೂರಿಗೆ ಬರ್ತಾರೆ ಪ್ರಜ್ವಲ್‌!; ವಕೀಲರ ಸಲಹೆಯಂತೆ ವಿಚಾರಣೆಗೆ ಹಾಜರ್

ಬೆಂಗಳೂರು;‌ ಅಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್‌ ರಿಲೀಸ್‌ ಆದ ಮೇಲೆ ಏಪ್ರಿಲ್‌ 27ರಂದು ಜರ್ಮನಿಗೆ ಹಾರಿದ್ದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿಧಿ ಇಲ್ಲದೆ ಬೆಂಗಳೂರಿಗೆ ಬರಲು ಸಜ್ಜಾಗುತ್ತಿದ್ದಾರೆ.. ಮೂಲಗಳ ಪ್ರಕಾರ ಅವರು ಮೇ 10 ರೊಳಗೆ ಬೆಂಗಳೂರಿಗೆ ವಾಪಸ್ಸಾಗಿ ಎಸ್‌ಐಟಿ ವಿಚಾರಣೆ ಎದುರಿಸುತ್ತಾರೆ ಎಂದು ಹೇಳಲಾಗುತ್ತಿದೆ.. ವಿದೇಶದಲ್ಲಿ ಕೂತೇ ವಕೀಲರ ಜೊತೆ ಕಾನೂನು ಹೋರಾಟದ ಬಗ್ಗೆ ಪ್ರಜ್ವಲ್‌ ನಿರಂತರವಾಗಿ ಚರ್ಚೆ ನಡೆಸುತ್ತಿದ್ದಾರೆ.. ವಕೀಲರ ಸಲಹೆಯಂತೆ ಅವರು ಮೇ 10ರೊಳಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ..

ಕೆಆರ್‌ ನಗರದ ಮಹಿಳೆಯ ಅಪಹರಣ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರೇವಣ್ಣ ಅವರಿಗೂ ಈಗ ಕಾನೂನು ಸಂಕಷ್ಟ ಎದುರಾಗಿದೆ.. ಈ ಕೇಸ್‌ ದಾಖಲಾದ ಬೆನ್ನಲ್ಲೇ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.. ಇಂದು ಈ ಅರ್ಜಿ ವಿಚಾರಣೆಗೆ ಬರಲಿದೆ.. ಇದು ರೇವಣ್ಣ ಅವರಿಗೆ ಅಗ್ನಿ ಪರೀಕ್ಷೆಯಾಗಿದೆ..

ಮಹಿಳೆ ಅಪಹರಣ ಕೇಸ್‌ನಲ್ಲಿ ಎರಡನೇ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ.. ಸತೀಶ್‌ ಬಾಬು ಎಂಬುವವರು ಬಂದು ರೇವಣ್ಣ ಅವರು ಕರೆದುಕೊಂಡು ಬರುವಂತೆ ಹೇಳಿದ್ದಾರೆ ಎಂದು ನನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಮಹಿಳೆಯ ಮಗ ಆರೋಪ ಮಾಡಿದ್ದು, ದೂರು ದಾಖಲಿಸಿದ್ದಾನೆ.. ಇದರ ಆಧಾರದ ಮೇಲೆ ಸತೀಶ್‌ ಬಾಬುನನ್ನು ಬಂಧಿಸಲಾಗಿದೆ.. ಇದರಲ್ಲಿ ರೇವಣ್ಣ ಮೊದಲನೇ ಆರೋಪಿಯಾಗಿದ್ದಾರೆ..

ಇನ್ನು ಈ ಕೇಸ್‌ ದಾಖಲಾಗುತ್ತಿದ್ದಂತೆ ರೇವಣ್ಣ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ.. ನಿರೀಕ್ಷಣಾ ಜಾಮೀನಿಗಾಗಿ ಎದುರು ನೋಡುತ್ತಿದ್ದಾರೆ.. ಒಂದು ವೇಳೆ ಜಾಮೀನು ಸಿಗದಿದ್ದರೆ ಅವರಿಗೂ ಬಂಧನದ ಭೀತಿ ಇದೆ.. ಇನ್ನು ಎಸ್‌ಐಟಿ ಎರಡನೇ ನೋಡಿಸ್‌ ಜಾರಿ ಮಾಡಿದೆ.. ಇಂದು ಸಂಜೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ಅವರಿಗೆ ಸೂಚಿಸಲಾಗಿದೆ.. ಇಂದು ನಿರೀಕ್ಷಣಾ ಜಾಮೀನು ಸಿಕ್ಕರೆ ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ..

 

Share Post