ಮಹಿಳೆ ಜೊತೆ ಪೊಲೀಸ್ ಪೇದೆ ಆತ್ಮಹತ್ಯೆ
ಹುಬ್ಬಳ್ಳಿ; ಪೊಲೀಸ್ ಪೇದೆಯೊಬ್ಬರು ಮನೆಯೊಂದರಲ್ಲಿ ಮಹಿಳೆಯೊಬ್ಬರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾತೆ.. ಹುಬ್ಬಳ್ಳಿಯ ನವನಗರದ ಗಾಮನಗಟ್ಟಿ ಎಂಬಲ್ಲಿ ಈ ಘಟನೆ ನಡೆದಿದೆ..
ಧಾರವಾಡ ಸಂಚಾರಿ ಠಾಣೆ ಪೇದೆ ಮಹೇಶ್ ಹೆಸರೂರು ಹಾಗೂ ವಿಜಯಲಕ್ಷ್ಮಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು.. ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
ಎರಡು ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ.. ಮನೆಯಿಂದ ದುರ್ವಾಸನೆ ಬರುತ್ತಿತ್ತು. ಹೀಗಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.. ಪೊಲೀಸರು ಬಾಗಿಲು ಒಡೆದು ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ..
ಮಹೇಶ್ ಈಗಾಗಲೇ ವಿವಾಹವಾಗಿತ್ತು.. ಆದ್ರೆ ವಿಜಯಲಕ್ಷ್ಮಿ ಜೊತೆಗೂ ಆತ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂದು ಹೇಳಲಾಗಿದೆ.. 15 ದಿನಗಳ ಹಿಂದಷ್ಟೇ ಇಬ್ಬರೂ ಈ ಮನೆ ಬಾಡಿಗೆಗೆ ಪಡೆದಿದ್ದರು ಎಂದು ತಿಳಿದುಬಂದಿದೆ.