Politics

ಶಕ್ತಿ ಯೋಜನೆ ಬಗ್ಗೆ ಮೋದಿ ಹೇಳಿಕೆ ಅವೈಜ್ಞಾನಿಕ; ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು; ಶಕ್ತಿ‌ ಯೋಜನೆಯಿಂದ  METRO ಕುತ್ತು ಎಂಬ  ಪ್ರಧಾನ ಮಂತ್ರಿಗಳಾದ ಮೋದಿಯವರ ಹೇಳಿಕೆ ಅವೈಜ್ಞಾನಿಕ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ..

ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ‌ ಪ್ರಯಾಣ ನೀಡುವುದು ಸರಿಯಲ್ಲ, ಇದರಿಂದ METRO ಕುತ್ತು ಬರುತ್ತದೆ ಎಂಬುದಾಗಿ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆ ಅವೈಜ್ಞಾನಿಕ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು..

 ಶಕ್ತಿ ಯೋಜನೆಯನ್ನು ಜೂನ್ 11, 2023 ರಿಂದ ರಾಜ್ಯದಲ್ಲಿ ಜಾರಿಗೆ ತರಲಾಯಿತು. ಇಂದಿನವರೆಗೆ ಅಂದರೆ ಮೇ 20, 2024 ರವರೆಗೆ ಶಕ್ತಿ ಯೋಜನೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ 67.34ಕೋಟಿ.

ಕಳೆದ ಒಂದು ವರ್ಷದಲ್ಲಿ  ನಮ್ಮ METRO ಪ್ರಯಾಣಿಕರ ಸಂಖ್ಯೆ ಶೇ.30 ಏರಿಕೆ ಕಂಡಿದೆ. ಜನವರಿ‌ 2023 ರಲ್ಲಿ ಮೆಟ್ರೋ‌ ಪ್ರಯಾಣಿಕರ ಸಂಖ್ಯೆ 1.65 ಕೋಟಿ,‌ ಆದಾಯ  39.15 ಕೋಟಿಯಾಗಿತ್ತು‌, ಅದೇ ಏಪ್ರಿಲ್ 2024 ರಲ್ಲಿ ಪ್ರಯಾಣಿಕರ ಸಂಖ್ಯೆ 2 ಕೋಟಿಗೆ ಏರಿಕೆಯಾಗಿದ್ದು, ಆದಾಯ ರೂ. 51.71 ಕೋಟಿಗೆ ಏರಿಕೆಯಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ..

2023 ಕ್ಕೆ ಹೋಲಿಸಿದರೆ 2024 ರಲ್ಲಿ ಒಂದು ತಿಂಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಸರಾಸರಿ 35 ಲಕ್ಷ  ಏರಿಕೆ ಮತ್ತು ಆದಾಯದಲ್ಲಿ ರೂ. 1.10 ಕೋಟಿ ಏರಿಕೆ ಕಂಡಿದೆ‌. ಈ ಮೇಲಿನ ಅಂಕಿಅಂಶಗಳಿಂದ ಶಕ್ತಿ ಯೋಜನೆಯಿಂದ METRO ಯಾವ ರೀತಿಯಿಂದಲೂ ಧಕ್ಕೆ‌ ಆಗಿಲ್ಲ, ಬದಲಿಗೆ ಮೆಟ್ರೋ  ಪ್ರಯಾಣಿಕರ ಸಂಖ್ಯೆ‌ ಮತ್ತು ಆದಾಯದಲ್ಲಿ ಗಣನೀಯ ಹೆಚ್ಚಳವಾಗಿರುವುದು ಕಂಡುಬರುತ್ತದೆ ಎಂದು ಸಚಿವರು ಹೇಳಿದ್ದಾರೆ..

 

 ಆದ್ದರಿಂದ ಉಚಿತ ಪ್ರಯಾಣ ಯೋಜನೆಯಿಂದ ಮೆಟ್ರೋಗೆ ಹೇಗೆ ಧಕ್ಕೆಯಾಗಿದೆ ಎಂಬುದನ್ನು ಪ್ರಧಾನಮಂತ್ರಿಗಳು ವಿವರಿಸಬೇಕು, ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಹಾಗೂ ಅತ್ಯಂತ ಯಶಸ್ವಿಯಾಗಿ‌ ಜಾರಿಯಾಗಿರುವ ಶಕ್ತಿ ಯೋಜನೆಯನ್ನು ದೂಷಿಸುವ ಇರಾದೆಯೇ ? ಅಥವಾ ಮಾಹಿತಿ ಕೊರತೆಯೋ? ತಿಳಿಯದಾಗಿದೆ ಎಂದಿದ್ದಾರೆ..

ಶಕ್ತಿ‌ಯೋಜನೆ ನಂತರ ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಹಾಗೂ ಮಹಿಳೆಯರ ಸಬಲೀಕರಣ ಮಹತ್ವದ ಯೋಜನೆಯನ್ನು ಪ್ರಧಾನಮಂತ್ರಿಯಾದವರು ಈ ರೀತಿಯಾಗಿ ಟೀಕಿಸುವುದು ಸಾಧುವಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ..

 

Share Post