CrimeNational

ಸಂಸತ್ತಿನ ಎದುರು ಬೆಂಕಿ ಹಚ್ಚಿಕೊಳ್ಳು ಪ್ಲ್ಯಾನ್ ಮಾಡಿದ್ದ ಆರೋಪಿಗಳು

ನವದೆಹಲಿ; ಸಂಸತ್ ಒಳಗೆ ನುಗ್ಗಿ ಕಲರ್ ಸ್ಮೋಕ್ ಸಿಡಿಸಿದ್ದ ಆರೋಪಿಗಳ ಪ್ಲ್ಯಾನ್ ಬೇರೆ ಇತ್ತು ಅನ್ನೋದು ವಿಚಾರಣೆ ವೇಳೆ ಸಾಬೀತಾಗಿದೆ.

 ದಾಳಿ ನಡೆಸಿದ ದಿನ ಆರೋಪಿಗಳಯ  ಸಂಸತ್ ಭವನದ ಮುಂದೆ ಬೆಂಕಿ ಹಚ್ಚಿಕೊಳ್ಳಲು ಪ್ಲ್ಯಾನ್ ಮಾಡಿದ್ದರು ಅನ್ನೋದು‌ವಿಚಾರಣೆ ವೇಳೆ ಗೊತ್ತಾಗಿದೆ. ಬೆಂಕಿ ಹಚ್ಚಿಕೊಂಡರೂ ಏನೂ ಆಗದಿರಲು ಒಂದು ಜೆಲ್ ಮೈಗೆ ಹಚ್ಚಿಕೊಳ್ಳಲು ತೀರ್ಮಾನಿಸಿದ್ದರು. ಆನ್ ಲೈನ್ ನಲ್ಲಿ ಅದನ್ನು ತರಿಸಲು ಮುಂದಾಗಿದ್ದರು. ಆದ್ರೆ ತರಿಸಲು ಸಾಧ್ಯವಾಗದ ಕಾರಣ, ಸ್ಮೋಕ್ ಬಾಂಬ್ ಗಳನ್ನು ಶೂಗಳಲ್ಲಿ ಇಟ್ಟುಕೊಂಡು ಒಳ ಹೋಗಿದ್ದರು.

ಏನಾದರೂ ದೊಡ್ಡ ಅನಾಹುತ ಮಾಡಿ ದೇಶದ‌ ಗಮನ ಸೆಳೆಯುವುದು ಇವರ ಉದ್ದೇಶವಾಗಿತ್ತು ಎಂದು ತಿಳಿದುಬಂದಿದೆ.

ಆದರೆ ಬೆಂಕಿ ಜೆಲ್ ಅನ್ನು ಒಳಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಸ್ಮೋಕ್ ಬಾಂಬ್ ಅನ್ನು ಮಾತ್ರ ಶೂನಲ್ಲಿ ಇಟ್ಟುಕೊಂಡು ಹೋಗಿದ್ದರು. ಏನಾದರೂ ದೊಡ್ಡ ಅನಾಹುತ ಮಾಡಿ ದೇಶದ ಗಮನ ಸೆಳೆಯುವುದು ಇವರ ಮಾಸ್ಟರ್ ಪ್ಲಾನ್ ಆಗಿತ್ತು.

ದೇಶದಲ್ಲಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಸರ್ಕಾರದ ಗಮ‌ನ ಸೆಳೆಯುವುದೇ ದಾಳಿಯ ಉದ್ದೇಶವಾಗಿತ್ತು ಎನ್ನಲಾಗಿದೆ.

Share Post